ನವದೆಹಲಿ, ಎ.24 (Daijiworld News/MB) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲ್ಲೇ ಇದ್ದು ಪರೀಕ್ಷಾ ಕಿಟ್ಗಳ ಅವಶ್ಯಕತೆ ಕೂಡಾ ಹೆಚ್ಚಾಗಿದೆ. ಚೀನಾದಲ್ಲಿ ಇಂತಹ ಕಿಟ್ಗಳನ್ನು ಹೆಚ್ಚಾಗಿ ತಯಾರಿ ಮಾಡುವ ಕಾರಣ ಅಲ್ಲಿಂದಲ್ಲೇ ಕಿಟ್ ಆಮದು ಮಾಡಕೊಳ್ಳಲಾಗಿತ್ತು. ಆದರೆ ಚೀನಾದಿಂದ ಬರುವ ಕಿಟ್ಗಳು ಕಳಪೆಯಾಗಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿರುವ ನಡುವೆ ದೆಹಲಿ ಐಐಟಿ ವಿಭಾಗದ ಸದಸ್ಯರು ಕಡಿಮೆ ವೆಚ್ಚದ ಕೋವಿಡ್-19 ಪರೀಕ್ಷಾ ಕಿಟ್ ತಯಾರಿ ಮಾಡಿದ್ದಾರೆ.
ಐಐಟಿ ದೆಹಲಿಯ ಕುಸುಮಾ ಸ್ಕೂಲ್ ಆಫ್ ಬಯೋಲಾಜಿಕಲ್ ಸೈನ್ಸಸ್ನ ಸಂಶೋಧಕರು ಈ ಕಿಟ್ ತಯಾರಿಸಿದ್ದು ಇದಕ್ಕೆ ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಆಯೋಗ) ಅನುಮೋದನೆ ಕೂಡ ನೀಡಿದೆ. ಆ ಮೂಲಕ ಐಐಟಿ ದೆಹಲಿ ಆರ್ಟಿ-ಪಿಸಿಆರ್ ಆಧಾರಿತ ಕಿಟ್ಗಳಿಗಾಗಿ ಐಸಿಎಂಆರ್ನಿಂದ ಅನುಮೋದನೆ ಪಡೆದ ಮೊದಲ ಶಿಕ್ಷಣ ಸಂಸ್ಥೆಯಾಗಿದೆ.
ಈ ಕಿಟ್ಗಳನ್ನು ಆರ್ ಟಿಪಿಸಿಆರ್ ಕಿಟ್ ಮೂಲಕ ದೇಶಾದ್ಯಂತ ಪರೀಕ್ಷಿಸಲಿದ್ದು ಶೀಘ್ರದಲ್ಲೇ ಈ ಕಿಟ್ಗಳು ಮಾರುಕಟ್ಟೆಯಲ್ಲಿ ದೊರೆಯಲಿದೆ. ಈ ಕುರಿತಾಗಿ ಐಐಟಿ ದೆಹಲಿಯ ಎರಡು ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಇನ್ನು ಈ ಕಿಟ್ಗಳ ಮೂಲಕ ಅಗ್ಗವಾಗಿ ಕೊರೊನಾ ಪರೀಕ್ಷೆ ನಡೆಸಬಹುದು ಎನ್ನಲಾಗಿದೆ.
ಕಿಟ್ ತಯಾರಿಕಾ ತಂಡದಲ್ಲಿ ಐಐಟಿ ದೆಹಲಿಯ ಪಿಎಚ್ ಡಿ ಪದವಿ ಪಡೆದ ಪ್ರಶಾಂತ್ ಪ್ರಧಾನ್, ಆಶುಕೋಷ್ ಪಾಂಡೇ, ಪ್ರವೀಣ್ ತ್ರಿಪಾಠಿ, ಸಹ ವೈದ್ಯಕೀಯ ತಜ್ಞರಾದ ಡಾ.ಪರೂಲ್ ಗುಪ್ತಾ, ಅಖಿಲೇಶ್ ಮಿಶ್ರಾ, ಸಹ ಪ್ರಾಧ್ಯಾಪಕರಾದ ವಿವೇಕಾನಂದನ್ ಪೆರುಮಾಳ್, ಮನೋಜ್ ಬಿ ಮೆನನ್, ಜೇಮ್ಸ್ ಗೋಮ್ಸ್, ಭಿಶ್ವಜಿತ್ ಖಂಡು ಇದ್ದಾರೆ.