ರಾಮನಗರ, ಎ.24(DaijiworldNews/PY) : ಗ್ರೀನ್ ಜೋನ್ನಲ್ಲಿದ್ದ ರಾಮನಗರಕ್ಕೆ ಕೊರೊನಾ ಸೋಂಕು ಹರಡಲು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಅವರ ನಿರ್ಧಾರವೇ ಕಾರಣ. ಇದರ ನೈತಿಕ ಹೊಣೆ ಹೊತ್ತು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ರವಿ ಶುಕ್ರವಾರ ಹೇಳಿದ್ದಾರೆ.
ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರವೇ ಕೊರೊನಾ ಸೋಂಕು ಹರಡಲು ನೇರ ಕಾರಣ ಎಂದರು.
ಅಶ್ವತ್ಥನಾರಾಯಣ ಅವರಂಥ ಅಸಮರ್ಥ ಸಚಿವ ಮತ್ತೊಬ್ಬರಿಲ್ಲ. ಗ್ರೀನ್ ಝೋನ್ನಲ್ಲಿದ್ದ ರಾಮನಗರಕ್ಕೆ ಕೊರೊನಾ ಸೋಂಕು ಹರಡಲು ಅವರ ತೀರ್ಮಾನವೇ ಕಾರಣ ಎಂದು ಹೇಳಿದರು.
ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆ ಬರುತ್ತದೆಂಬ ಕಾರಣದಿಂದ ಅಲ್ಲಿ ಕೊರೊನಾ ಆಸ್ಪತ್ರೆ ಕಟ್ಟಲು ಇವರು ಬಿಡಲಿಲ್ಲ. ಹಾಗಿರುವಾಗ ಪಾದರಾಯನಪುರ ಆರೋಪಿಗಳಗನ್ನು ರಾಮನಗರಕ್ಕೆ ಕರೆ ತರಲು ಯಾಕೆ ಒಪ್ಪಿಗೆ ನೀಡಿದರು ಎಂದು ಪ್ರಶ್ನಿಸಿದರು.
ಐ.ಟಿ.ಬಿ.ಟಿ.ಕಂಪೆನಿಗಳಿಂದ ಶೇ.10ರಷ್ಟು ಕಿಕ್ ಬ್ಯಾಕ್ ಪಡೆದುಕೊಂಡು ಐ.ಟಿ ಕಂಪೆನಿಗಳಲ್ಲಿ ಶೇ.33 ಸಿಬ್ಬಂದಿ ಕೆಲಸ ಮಾಡಲು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಮಾತನಾಡಿ, ಬಿಜೆಪಿಗೆ ರಾಮನಗರ ಜಿಲ್ಲೆಯಲ್ಲಿ ನೆಲೆಯಿಲ್ಲ. ಹಾಗಾಗಿ ಇಲ್ಲಿನ ಜನ ಸತ್ತರೆ ಸಾಯಲಿ ಎಂಬ ಕೆಟ್ಟ ಉದ್ದೇಶದಿಂದ ಆರೋಪಿಗಳನ್ನು ಇಲ್ಲಿನ ಜೈಲಿಗೆ ಸರ್ಕಾರ ಹಾಗೂ ಸಚಿವರು ಸ್ಥಳಾಂತರ ಮಾಡಿದ್ದಾರೆ ಎಂದು ಹೇಳಿದರು.