ನವದೆಹಲಿ, ಎ.24 (DaijiworldNews/PY) : ತನ್ನ ಅತ್ತೆ-ಮಾವನನ್ನು ಮಹಿಳೆಯೋರ್ವಳು ಹತ್ಯೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಹತ್ಯೆ ಮಾಡಿದ ಆರೋಪಿಯನ್ನು ಕವಿತಾ ಎನ್ನಲಾಗಿದೆ. ರಾಜ್ ಸಿಂಗ್ (61) ಹಾಗೂ ಓಮ್ವತಿ(58) ಎಂಬವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾಳೆ. ಈ ಘಟನೆ ಆಕೆಯ ಪತಿ ಹಾಗೂ ಎಂಟು ವರ್ಷದ ಮಕ್ಕಳಿಬ್ಬರು ಮನೆಯಲ್ಲಿರುವ ಸಂದರ್ಭ ನಡೆದಿದ್ದು, ಪತಿಯ ಮೇಲೆಯೂ ಅನುಮಾನ ಮೂಡಿದೆ.
ಬೆಳಗ್ಗೆ 11 ಗಂಟೆಗೆ ಪೊಲೀಸರು ಕೊಲೆಯಾಗಿರುವ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಇಬ್ಬರ ಮೃತದೇಹವು ರೂಂನಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿತ್ತು.
ಪ್ರತಿನಿತ್ಯ ಆಸ್ತಿಯ ವಿಚಾರವಾಗಿ ಗಲಾಟೆ ನಡೆಯುತ್ತಿತ್ತು. ಈ ಹತ್ಯೆಗೆ ಆಸ್ತಿ ವಿಚಾರವೇ ಕಾರಣವಾಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಈ ಹತ್ಯೆ ವಿಚಾರವಾಗಿ ಕವಿತಾ ಪತಿಯ ವಿಚಾರಣೆ ನಡೆಸಲಾಗುತ್ತಿದ್ದು, ಯಾರನ್ನೂ ಬಂಧಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.