ಬೆಂಗಳೂರು, ಎ.25 (Daijiworld News/MB) : ಕೊರೊನಾ ಹರಡುತ್ತಿರುವ ಕಾರಣದಿಂದಾಗಿ ಈಗಾಗಲೇ ಲಾಕ್ಡೌನ್ ವಿಸ್ತರಣೆ ಮಾಡಲಾಗಿದ್ದು ಮುನ್ನೆಚ್ಚರಿಕೆಯ ಭಾಗವಾಗಿ ರಾಜ್ಯ ಸರ್ಕಾರದ ವಿವಿಧ ವೃಂದದ ಹುದ್ದೆಗಳ ನೇಮಕಾತಿಗೆ ನಡೆಸಲಿದ್ದ ಎಲ್ಲಾ ಪರೀಕ್ಷೆಗಳನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಮುಂದೂಡಿ ಆದೇಶ ಹೊರಡಿಸಿದೆ.
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸಹಾಯಕ ಹಾಗೂ ಪ್ರಥಮ ದರ್ಜೆ ಸಹಾಯಕ, ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ ಒಟ್ಟು 106 ಹುದ್ದೆಗಳು, ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಗ್ರೂಪ್ 'ಎ' ವೃಂದ 54 ಹುದ್ದೆಗಳು ಮತ್ತು ವಿವಿಧ ಇಲಾಖೆಗಳ ಕಿರಿಯ ಸಹಾಯಕ ಹುದ್ದೆಗಳ ನೇಮಕಾತಿಗಾಗಿ ಮೇ, ಜೂನ್ ತಿಂಗಳಲ್ಲಿ ಈ ಪರೀಕ್ಷೆಗಳು ನಡೆಸಲೆಂದು ಈ ಮೊದಲು ನಿರ್ಧರಿಸಲಾಗಿದ್ದು ಇದೀಗ ಮುಂದೂಡಲಾಗಿದೆ.
ಲಾಕ್ಡೌನ್ ಅವಧಿ ಮುಗಿದ ಬಳಿಕ ಪರೀಕ್ಷೆಯ ದಿನ ನಿಗದಿ ಮಾಡಲಾಗುವುದು ಎಂದು ಕೆಪಿಎಸ್ಸಿ ಕಾರ್ಯದರ್ಶಿ ಜಿ. ಸತ್ಯವತಿ ತಿಳಿಸಿದ್ದಾರೆ.