ಬೆಂಗಳೂರು, ಎ.25 (DaijiworldNews/PY) : ಹಳಿತಪ್ಪಿರುವ ಅರ್ಥವ್ಯವಸ್ಥೆಯನ್ನು ಮರಳಿ ಅಭಿವೃದ್ಧಿಪಥದತ್ತ ಚಲಿಸುವಂತೆ ಮಾಡಲು ಕೇವಲ ಲಾಕ್ಡೌನ್ ಸಡಿಲಿಕೆ ಉಪಾಯವಾಗುವುದಿಲ್ಲ. ಇಂತಹ ತೀರ್ಮಾನಗಳಿಂದ ತಾವುಕರ್ನಾಟಕಕ್ಕೆ ದುರಂತಮಯ ಸನ್ನಿವೇಶ ತಂದೊಡ್ಡಿದ ಅಪಕೀರ್ತಿಗೆ ಒಳಗಾಗುತ್ತೀರಿ. ಈ ಕೂಡಲೇ ದುರಂತವನ್ನು ತಂದೊಡ್ಡುವ ತೀರ್ಮಾನವನ್ನು ಬಿಟ್ಟುಬಿಡಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಶಾಸಕ ಎಚ್.ಕೆ.ಪಾಟೀಲ ಹೇಳಿದ್ದಾರೆ.
ತಮ್ಮ ತಮ್ಮ ಉದ್ಯೋಗಗಳಲ್ಲಿ ಜನರು ಮರಳಿ ತೊಡಗಿ, ಪ್ರತಿನಿತ್ಯದಂತೆ ತಮ್ಮ ಆದಾಯವನ್ನು ಕ್ರೋಢಿಕರಿಸಿಕೊಳ್ಳುವುದು ಕೇವಲ ಈ ಲಾಕ್ಡೌನ್ ಸಡಿಲಿಕೆಯಿಂದ ಮಾತ್ರ ಸಾಧ್ಯವಾಗುವುದಿಲ್ಲ. ಎಂದು ಎಚ್.ಕೆ.ಪಾಟೀಲ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಲಾಕ್ಡೌನ್ ರಾಷ್ಟ್ರದ ಇತರೆಡೆ ಮತ್ತು ಪ್ರಪಂಚದ ಬೇರೆ ಬೇರೆ ಕಡೆ ಇರುವ ಕಾರಣ ಈ ಕ್ರಮದಿಂದ ಆರ್ಥಿಕತೆಗೆ ಚೈತನ್ಯ ದೊರಕುತ್ತದೆ ಎಂಬ ಸುಳ್ಳು ಸಮರ್ಥನೆಯಾಗಬಹುದು ಎಂದು ಹೇಳಿದ್ದಾರೆ.
ಮೇ 3, 2020ರವರೆಗೆ ರಾಜ್ಯದಲ್ಲಿ ಲಾಕ್ಡೌನ್ ಅನ್ನು ವಿಸ್ತರಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ಪ್ರಕಟಿಸಿತು. ಆದರೆ, ಈ ಲಾಕ್ಡೌನ್ ಅನ್ನು ದಿಢೀರನೇ 22ನೇ ತಾರೀಖು ರಾತ್ರಿ ಸಡಿಲಗೊಳಿಸಲಾಗಿದೆ ಎಂದು ಘೋಷಿಸಲಾಯಿತು. ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕ್ಯಾದ ಬಳಿಕ ಪ್ರಕರಣಗಳ ಸಂಖ್ಯೆ ಬೆಂಗಳೂರು ಹಾಗೂ ಇತರೆ ಕಡೆಗಳಲ್ಲಿ ಹೆಚ್ಚುತ್ತಾ ಹೋಗಿದೆ. ಈ ಬಾರಿ ಫಲಿತಾಂಶ ಪ್ರಕಟವಾಗಿ ಕೊರೊನಾ ಪತ್ತೆಯಾದ ಪ್ರಕರಣಗಳಲ್ಲಿ ನಮ್ಮ ರಾಜ್ಯದಲ್ಲಿ ಸಾಮುದಾಯಿಕ ಹರಡುವಿಕೆ ಪ್ರಾರಂಭವಾಗಿದೆ ಎಂಬ ಭಾವನೆ ಹೆಚ್ಚುತ್ತದೆ ಎಂದರು.
ಲಾಕ್ಡೌನ್ ಸಡಿಲಿಕೆ ಎಂಬ ನಿರ್ಧಾರ ಜನರ ಸರ್ವಾಂಗೀಣ ಹಿತವನ್ನೂ ಸಂಪೂರ್ಣವಾಗಿ ಪರಿಗಣಿಸಿ ಸರಿಯಾದ ರೀತಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕಾದ್ದು ಸರ್ಕಾರದ ಮುಖ್ಯ ಕರ್ತವ್ಯವಾಗಿತ್ತು. ಆದರೆ, ಸಂಪೂರ್ಣ ಲಾಕ್ಡೌನ್ ಅನ್ನು ಸಡಿಲಿಸಿ ರೆಡ್ ಅಲರ್ಟ್ ಪ್ರದೇಶದಲ್ಲಿಯೇ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಈವರೆಗೆ ರಾಜ್ಯದಲ್ಲಿ 22, ಏಪ್ರಿಲ್ 2020ಕ್ಕೆ 29,512 ಜನರನ್ನು ಪರೀಕ್ಷೆ ಮಾಡಲಾಗಿದೆ. 23 ಹಾಗೂ 24ರಂದು ಮಾಡಲಾಗಿರುವ ಪರೀಕ್ಷೆಗಳ ಸಂಖ್ಯೆ ದೊರಕಿಲ್ಲ ಎಂದು ಹೇಳಲಾಗಿದೆ. ನಮ್ಮ ರಾಜ್ಯದಲ್ಲಿ ಪ್ರಕರಣಗಳ ಸಂಖ್ಯರ ಕಡಿಮೆಯಾಗುತ್ತಿದೆ ಎಂದು ಸರ್ಕಾರ ಬೆನ್ನು ತಟ್ಟಿಕೊಳ್ಳುತ್ತಿದ್ದು, ಇದು ಸುಳ್ಳು ಸಮರ್ಥನೆಯಾಗುತ್ತಿದೆ ಎಂದರು.
ಸತ್ಯ ಬೇರೆಯೇ ಇರುವ ಕಾರಣ, ರಾಜ್ಯದಲ್ಲಿ ಕ್ವಾರಂಟೈನ್ಗರ ಒಳಪಟ್ಟಿರುವ ಕನಿಷ್ಟ ಮೂರು ಲಕ್ಷ ಮಂದಿಯಲ್ಲಿ ಈವರೆಗೆ ಮೂವತ್ತು ಸಾವಿರ ಮಂದಿಯನ್ನಷ್ಟೇ ಕೊರೊನಾ ತಪಾಸಣೆ ಮಾಡಲಾಗಿದೆ. ಪರಿಸ್ಥಿತಿ ಹೀಗಿರುವ ಸಂದರ್ಭ ತಪಾಸಣೆ ಮಾಡದೆಯೇ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ, ತಾಂತ್ರಿಕ ಹಾಗೂ ವೈದ್ಯಕೀಯ ಕಾರಣಗಳಿಲ್ಲ ಎಂದು ತಿಳಿಸಿದ್ದಾರೆ.
ರಾಷ್ಟರದಲ್ಲಿ 25 ಸಾವಿರ ಸೋಂಕಿತರಲ್ಲಿ, 5 ಸಾವಿರ ಸೋಂಕಿತರು ಮಾತ್ರ ಈವರೆಗೆ ಗುಣಮುಖರಾಗಿದ್ದಾರೆ. ಒಂದು ಸಾವಿರ ಮಂದಿ ಮೃತಪಟ್ಟಿದ್ದಾರೆ. ಈ ರೀತಿಯಾದ ಪರಿಸ್ಥಿತಿ ಇರುವ ಸಂದರ್ಭ ಲಾಕ್ಡೌನ್ ಸಡಿಲಿಸು ತಮ್ಮ ನಿರ್ಧಾರವು ದುರಂತ ತಂದೊಡ್ಡುತ್ತದೆ. ಹಾಗಾಗಿ ಈ ನಿರ್ಧಾರವನ್ನು ಪುನಃ ಪಡೆಯಲು ಹೇಳಿದ್ದಾರೆ.