ನವದೆಹಲಿ, ಎ.25 (Daijiworld News/MB) : ಭಾರತದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದ ರಾಜ್ಯದ ಪುಣೆ ಜಿಲ್ಲೆಯ ಶಿಕ್ಷಣ ಸಂಸ್ಥೆಯೊಂದು ತನ್ನ ಸಂಸ್ಥೆಯ ಆವರಣದಲ್ಲಿರುವ ಮಸೀದಿಯ ಹಾಲ್ನ್ನು ಕೊರೊನಾ ಶಂಕಿತರ ಕ್ವಾರಂಟೈನ್ಗಾಗಿ ನೀಡಲು ನಿರ್ಧಾರ ಮಾಡಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಆಝಾದ್ ಸಂಸ್ಥೆ ಅಧೀನದಲ್ಲಿರುವ ಮಹಾರಾಷ್ಟ್ರ ಕಾಸ್ಮೋಪಾಲಿಟನ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಪಿ.ಎ. ಇನಾಂದಾರ್ ಅವರು, ಇದು ಬಹಳ ಸಂಕಷ್ಟದ ಸಮಯ, ಈ ಸಂದರ್ಭದಲ್ಲಿ ಎಲ್ಲರೂ ಕೊರೊನಾ ನಿಯಂತ್ರಣಕ್ಕಾಗಿ ಕೈಜೋಡಿಸಬೇಕು. ಕ್ವಾರಂಟೈನ್ನಲ್ಲಿ ಇರುವವರಿಗೆ ಆಹಾರದ ವ್ಯವಸ್ಥೆ ಬೇಕಾದ್ದಲ್ಲಿ ಅದನ್ನೂ ಕೂಡಾ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಭವಾನಿ ಪೀಠ ಪ್ರದೇಶದ ಆಝಾದ್ ಸಂಸ್ಥೆಯ ಕ್ಯಾಂಪಸ್ನಲ್ಲಿರುವ ಈ ಮಸೀದಿ ಹಾಲ್ ಸುಮಾರು 9,000 ಚದರ ಅಡಿ ವಿಸ್ತಾರವಾಗಿದ್ದು 80 ಜನರನ್ನು ಸುರಕ್ಷಿತವಾಗಿ, ಸುಲಭವಾಗಿ ಕ್ವಾರಂಟೈನ್ನಲ್ಲಿ ಇರಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.