ನವದೆಹಲಿ, ಏ 25 (Daijiworld News/MSP): ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೆಲ ಸಡಿಲಿಕೆಯನ್ನು ಘೋಷಿಸಿದ್ದು, ಮದ್ಯದಂಗಡಿ ಹಾಗೂ ಮಾಲ್ ಗಳಿಗೆ ನಿರ್ಬಂಧಿಸದಂತೆ ಸೆಲೂನ್ ಗಳನ್ನು ತೆರೆಯಲು ಅನುತಿಯನ್ನು ಕೊಟ್ಟಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಕೇಂದ್ರ ಗೃಹ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿದ ಬಳಿಕ ಮಾತನಾಡಿದ, ’ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಪುನಿಯಾ ಸಲಿಲಾ ಶ್ರೀವಾಸ್ತವ್, ಹೇರ್ ಸಲೂನ್ ಗಳಿಗೆ ಅನುಮತಿ ಕೊಟ್ಟಿಲ್ಲ. ಕೇವಲ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳಿಗಷ್ಟೇ ಕೇಂದ್ರ ಗೃಹ ಇಲಾಖೆ ಅನುಮತಿ ಕೊಟ್ಟಿದೆ ಎಂದು ಸ್ಪಷ್ಟಪಡಿಸಿದರು. ಇದಲ್ಲದೆ ಯಾವುದೇ ರೀತಿಯ ರೆಸ್ಟೋರೆಂಟ್ ಗಳನ್ನು ತೆರೆಯಲು ಸಹ ಅನುಮತಿ ಕೊಟ್ಟಿಲ್ಲ ಎಂದು ತಿಳಿಸಿದರು.
ಜನವಸತಿ ಪ್ರದೇಶದ ಸ್ಥಳೀಯ ಎಲ್ಲಾ ಅಂಗಡಿಗಳನ್ನು ಷರತ್ತಿನೊಂದಿಗೆ ತೆರೆಯಲು ಅವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. ಶೇಕಡಾ 50 ರಷ್ಟು ಸಿಬ್ಬಂದಿಗಳನ್ನು ಬಳಸಿಕೊಂಡು ಅಂಗಡಿಯವರು ಹಾಗೂ ಗ್ರಾಹಕರು ಮಾಸ್ಕ್ಗಳು, ಗ್ಲೌಸ್ಗಳು ಧರಿಸಿ ವಹಿವಾಟು ಆರಂಭಿಸಬಹುದು ಎಂದು ಹೇಳಿತ್ತು.