ಮಂಡ್ಯ, ಏ 25 (Daijiworld News/MSP): ಮಂಡ್ಯದಲ್ಲಿ ಅಂಬೇಡ್ಕರ್ ಭವನದಲ್ಲಿ ಪತ್ರಕರ್ತರಿಗೆ ಕೊರೊನಾ ಪರೀಕ್ಷೆ ಮಾಡುವುದಕ್ಕೆ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಹಾಗೂ ಅವರ ಪುತ್ರ ಅಡ್ಡಿಪಡಿಸಿ ಘಟನೆ ಶನಿವಾರ ನಡೆದಿದ್ದು, ಇದೀಗ ಇವರ ವಿರುದ್ದ ಪ್ರಕರಣ ದಾಖಲಾಗಿದೆ.
ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ
ವಾರ್ತಾಇಲಾಖೆಯೂ ಪತ್ರಕರ್ತರಿಗೆ ಕೊರೊನಾ ಪರೀಕ್ಷೆಯನ್ನು ಅಂಬೇಡ್ಕರ್ ಭವನದಲ್ಲಿ ನಡೇಸುತ್ತಿದ್ದು, ಇದು ತಮ್ಮ ಮನೆಯ ಪಕ್ಕದಲ್ಲಿರುವುದರಿಂದ ಪರೀಕ್ಷೆ ನಡೆಯುತ್ತಿದ್ದ ವೇಳೆ ಶ್ರೀಕಂಠೇಗೌಡ ಮತ್ತು ಪುತ್ರ ಹಾಗೂ ಇತರರು ಆಕ್ಷೇಪ ವ್ಯಕ್ತಪಡಿಸಿದರೆನ್ನಲಾಗಿದೆ.
ಈ ಸಂದರ್ಭದಲ್ಲಿ ಪತ್ರಕರ್ತರು ಹಾಗೂ ಶ್ರೀಕಂಠೇಗೌಡ, ಅವರ ಪುತ್ರ ಹಾಗೂ ಬಡಾವಣೆಯ ಇತರರ ನಡುವೆ ವಾಗ್ವಾದ, ತಳ್ಳಾಟ ಶುರುವಾಗಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು, ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶ್ರೀಕಂಠೇಗೌಡ ಪುತ್ರನನ್ನು ವಶಕ್ಕೆ ಪಡೆದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.’
ಇದೀಗ ಎಮ್ ಎಲ್ ಸಿ ಶ್ರೀಕಂಠೇಗೌಡ ವಿರುದ್ದ ಎಫ್ ಐ ಆರ್ ದಾಖಲಾಗಿದ್ದು ಇವರು ಎ-1 ಆರೋಪಿಯಾಗಿದ್ದಾರೆ. ಇದಲ್ಲದೆ ಶ್ರೀಕಂಠೇಗೌಡ ಪುತ್ರ ಕೃಷಿಕ್ ಹಾಗೂ ಹಲ್ಲೆ ನಡೆಸಿದ ಇತರರ ವಿರುದ್ದ ಪ್ರಕರಣ ದಾಖಲಾಗಿದೆ.