ನವದೆಹಲಿ, ಎ.25 (DaijiworldNews/PY) : ದೆಹಲಿಯ ಹಿತದೃಷ್ಟಿ ಕಾಪಾಡುವ ನಿಟ್ಟಿನಲ್ಲಿ ಆರೋಗ್ಯ ಸೇತು ಆಪ್ ಹೊಂದಿಲ್ಲದವರಿಗೆ ದೆಹಲಿಗೆ ಪ್ರವೇಶ ನೀಡಲು ಅವಕಾಶ ನೀಡಬಾರದು ಎಂದು ಸರ್ಕಾರಕ್ಕೆ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಹೇಳಿದ್ದಾರೆ.
ಶುಕ್ರವಾರ ಆಯೋಜನೆಗೊಂಡ ಕೊರೊನಾ ಸಂಬಂಧಿತ ಸಭೆಯಲ್ಲಿ ಈ ವಿಚಾರವಾಗಿ ಸಲಹೆ ನೀಡಿದ್ದಾರೆ. ಅವರ ಸಲಹೆಯ ಬಗ್ಗೆ ದೆಹಲಿ ಸರ್ಕಾರ ಚಿಂತನೆ ಆರಂಭಿಸಿದ್ದು, ಈ ವಿಷಯದ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗಿದೆ.
ರಾಷ್ಟ್ರೀಯ ಕಾಯಿಲೆಗಳ ನಿಯಂತ್ರಣ ಕೇಂದ್ರದ ನಿರ್ದೇಶಕ ಸುರ್ಜಿತ್ ಕುಮಾರ್ ಅವರೈ ಕೂಡಾ ಇದೇ ರೀತಿಯಾದ ಶಿಫಾರಸು ಮಾಡಿದ್ದರು. ಅದರೊಂದಿಗೆ ದೆಹಲಿಯಲ್ಲಿ 3, 5 ಹಾಗೂ 14ನೇ ದಿನ ಸೇರಿ ರ್ಯಾಪಿಡ್ ಟೆಸ್ಟ್ ಹೆಚ್ಚಿಸಬೇಕು. ಕೊರೊನಾ ಸೋಂಕಿತರು ಯಾರೊಬ್ಬರೂ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಈ ವಿಚಾರವನ್ನು ಆಲಿಸಿದ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಕೂಡಾ ಆರೋಗ್ಯ ಆಪ್ ಹೊಂದಿರುವವರಿಗೆ ಮಾತ್ರವೇ ದೆಹಲಿಗೆ ಪ್ರವೇಶ ನೀಡಲು ಅವಕಾಶ ಎಂದು ಹೇಳಿದ್ದರು.