ನವದೆಹಲಿ, ಎ.26 (Daijiworld News/MB) : ದೇಶದಲ್ಲಿ ಕೊರೊನಾ ಪ್ರಕರಗಳು ಹೆಚ್ಚುತ್ತಲ್ಲೇ ಇದ್ದು ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 1,990 ಹೊಸ ಪ್ರಕರಣಗಳು ಪತ್ತೆಯಾಗಿದ್ದು 49 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 26 ಸಾವಿರದ ಗಡಿ ದಾಟಿದ್ದು ಈವರೆಗೂ ಈ ಮಾರಣಾಂತಿಕ ಸೋಂಕಿಗೆ 824 ಮಂದಿ ಮೃತಪಟ್ಟಿದ್ದಾರೆ. 5,804 ಮಂದಿ ಗುಣಮುಖರಾಗಿದ್ದಾರೆ.
ದೇಶದಲ್ಲೇ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ ಒಟ್ಟು 7,628 ಜನರಲ್ಲಿ ಸೋಂಕು ಪತ್ತೆಯಾಗಿದ್ದು 323 ಮಂದಿ ಸಾವನ್ನಪ್ಪಿದ್ದಾರೆ. 1076 ಜನರು ಗುಣಮುಖರಾಗಿದ್ದಾರೆ. ಕರ್ನಾಟಕದಲ್ಲಿ ಒಟ್ಟು 500 ಸೋಂಕು ಪ್ರಕರಣಗಳು ದಾಖಲಾಗಿದ್ದು 18 ಮಂದಿ ಸಾವನ್ನಪ್ಪಿದ್ದಾರೆ. 158 ಮಂದಿ ಗುಣಮುಖರಾಗಿದ್ದಾರೆ.
ಇನ್ನು ಮಹಾರಾಷ್ಟ್ರದ ನಂತರ ಕೊರೊನಾ ಹಾಟ್ಸ್ಪಾಟ್ ಆಗಿ ಪರಿಣಮಿಸಿರುವ ಗುಜರಾತ್ನಲ್ಲಿ ಸೋಂಕು ಪ್ರಕರಣಗಳು 3071 ಗೆ ಏರಿಕೆಯಾಗಿದೆ. 133 ಮಂದಿ ಕೊರೊನಾಗೆ ಬಲಿಯಾಗಿದ್ದು 282 ಮಂದಿ ಗುಣಮುಖರಾಗಿದ್ದಾರೆ.
ದೆಹಲಿಯಲ್ಲಿ 2,625 ಪ್ರಕರಣಗಳು, ತಮಿಳುನಾಡಿನಲ್ಲಿ 1,821 ಪ್ರಕರಣಗಳು, ರಾಜಸ್ಥಾನದಲ್ಲಿ 2,083 ಪ್ರಕರಣಗಳು, ಮಧ್ಯಪ್ರದೇಶದಲ್ಲಿ 2,096, ಆಂಧ್ರ ಪ್ರದೇಶದಲ್ಲಿ 1061 ಪ್ರಕರಣ, ತೆಲಂಗಾಣದಲ್ಲಿ 991 ಪ್ರಕರಣಗಳು, ಉತ್ತರ ಪ್ರದೇಶದಲ್ಲಿ 1793, ಕೇರಳ 457 ಪ್ರಕರಣಗಳು ದಾಖಲಾಗಿದೆ.