ಬೆಂಗಳೂರು, ಎ.26 (DaijiworldNews/PY) : ಬಸವಣ್ಣನವರ ವಚನಗಳು ಕೇವಲ ಬೋಧನೆಯಲ್ಲ. ಅವು ಕ್ರಾಂತಿ ಗೀತೆಗಳು. ಅವರು ತೋರಿದ ಹಾದಿ ಸಾಗಿದರೆ ಕಲ್ಯಾಣ ರಾಜ್ಯದ ಕನಸು ನನಸಾದೀತು. ಬಸವಣ್ಣನವರು ಹನ್ನೆರಡನೆ ಶತಮಾನದಲ್ಲಿ ಸಾಮಾಜಿಕ ನ್ಯಾಯದ ಮಾದರಿಯನ್ನು - ಸಂಸತ್ತಿನ ಪರಿಕಲ್ಪನೆಯನ್ನು ತೋರಿಸಿಕೊಟ್ಟವರು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಇಂದು ಬಸವ ಜಯಂತಿ ದಿನವಾಗಿದ್ದು, ರಾಜ್ಯದ ಜನತೆಗೆ ಈ ಬಗ್ಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ್ದಾರೆ.
ಬಸವ ಜಯಂತಿ ಪ್ರಯುಕ್ತ ಬಸವ ಸಮಿತಿ ಬೆಂಗಳೂರು ವತಿಯಿಂದ ಕಾರ್ಯಕ್ರಮ ಆಯೋಜಿಸಿದ್ದು, ಜಗಜ್ಯೋತಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಡಿಸಿಎಂ ಗೋವಿಂದ ಎಂ ಕಾರಜೋಳ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವತತ್ವಗಳನ್ನು ಅಳವಡಿಸಿಕೊಳ್ಳುವಂತೆ ಜನತೆಗೆ ಕರೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪಾಲ್ಗೊಂಡಿದ್ದು, ಬಸವೇಶ್ವರ ಪುತ್ಥಳಿಗೆ ಮಾರ್ಲಾರ್ಪಣೆ ಮಾಡಿದರು.