ಬೆಂಗಳೂರು, ಎ.26 (DaijiworldNews/PY) : ಸರ್ಕಾರ ಹೇಗೆ ನಡೆಯುತ್ತದೆ, ಸಿಸ್ಟಮ್ ಹೇಗೆ ಇರುತ್ತದೆ ಎಂದು ಗೊತ್ತಿದೆ. ನಾನು ಗೋಪಾಲಯ್ಯಗಿಂತ ಮೊದಲು ಮಂತ್ರಿ ಆದವನು ಎಂದು ಗೋಪಾಲಯ್ಯ ಅವರ ಮಾತಿಗೆ ಡಿಕೆಶಿ ತಿರುಗೇಟು ನೀಡಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ನಾನು ಗೋಪಾಲಯ್ಯಗಿಂತ ಮೊದಲು ಮಂತ್ರಿಯಾದವನು. ಇವರು ಅಕ್ಕಿ ಇಡುವ ಮುನ್ನ ಯಾಕೆ ಘೋಷಣೆ ಮಾಡಲಿಲ್ಲ. ಸರ್ಕಾರ ಹೇಗೆ ನಡೆಯುತ್ತದೆ, ಸಿಸ್ಟಮ್ ಹೇಗೆ ಇರುತ್ತದೆ. ಎಲ್ಲವೂ ನನಗೆ ತಿಳಿದಿದೆ ಎಂದು ತಿಳಿಸಿದರು.
ಬಿಜೆಪಿ ನಾಯಕರೊಬ್ಬರು ಹರಿಯಾಣದಿಂದ ರಾಜ್ಯಕ್ಕೆ ಬಂದ ಅಕ್ಕಿಯನ್ನು ತಮಿಳುನಾಡಿಗೆ ಮಾರಾಟ ಮಾರಿದ್ದಾರೆ ಎಂದು ಡಿಕೆಶಿ ಅವರು ಆರೋಪಿಸಿದ್ದರು. ಆದರೆ, ಡಿಕೆಶಿ ಅವರ ಆರೋಪವನ್ನು ಸಚಿವ ಗೋಪಾಲಯ್ಯ ಅವರು ತಿರಸ್ಕರಿಸಿದ್ದರು.
ಬಳಿಕ ಶಾಸಕ ಶ್ರೀಕಂಠೇ ಗೌಡ ದಾದಾಗಿರಿಯ ಬಗ್ಗೆ ಮಾತನಾಡಿದ ಅವರು, ರೇಣುಕಾಚಾರ್ಯಗೆ ಒಂದು ನ್ಯಾಯ, ಭರತ್ ಶೆಟ್ಟಿಗೆ ಒಂದು, ಶ್ರೀಕಂಠೇ ಗೌಡರಿಗೊಂದು ನ್ಯಾಯ ಬೇಡ. ಸರ್ಕಾರ ಎಲ್ಲರಿಗೂ ಒಂದೇ ರೀತಿಯಾಗಿ ಕಾಣಲಿ. ಸರಕಾರದವರು, ಮಾಧ್ಯಮದವರು ಒಬ್ಬರಿಗೊಂದರಂತೆ ಮಾತನಾಡಬೇಡಿ. ಯಾರೆ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಬೇಕು ಎಂದರು.