ಬೆಂಗಳೂರು, ಎ.26 (DaijiworldNews/PY) : ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೇ ಮನೆಯಲ್ಲಿಯೇ ಉಳಿದಿರುವ ಚಾಲಕರು ವಿನೂತನ ರೀತಿಯ ಚಳವಳಿ ಆರಂಭಿಸಿದ್ದು, ಖಾಲಿ ತಪ್ಪಲೆ, ತಟ್ಟೆಗಳ ಮುಂದೆ ಕುಳಿತು ಕಪ್ಪುಪಟ್ಟಿ ಧರಿಸಿ ಸೆಲ್ಪಿ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ.
ರಾಷ್ಟ್ರೀಯ ಚಾಲಅಪ್ ಲೋಡ್ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಸಂಸದರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸಂಪುಟ ಸದಸ್ಯರು, ಶಾಸಕರಿಗೆ ಪ್ರತಿಯೊಬ್ಬ ಚಾಲಕರು ತಮ್ಮ ಪೋಸ್ಟ್ ಗಳನ್ನು ತಲುಪುವಂತೆ ಮಾಡಬೇಕು. ಅಲ್ಲದೇ, ಇವರೆಲ್ಲರ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಿಗೆ ಇದನ್ನು ಟ್ಯಾಗ್ ಮಾಡಿ ಉಗ್ರ ಸ್ವರೂಪಕ್ಕೆ ಚಳವಳಿಯನ್ನು ಕೊಂಡೊಯ್ಯಬೇಕು ಎಂದಿದ್ದಾರೆ.
ಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಸೆಲ್ಪಿವಿತ್ ಖಾಲಿ ತಪ್ಪಲೆ, ಖಾಲಿ ತಟ್ಟೆ ಅಭಿಯಾನವನ್ನು ಇಂದಿನಿಂದ ಪ್ರಾರಂಭಿಸಲಾಗಿದೆ. ಈ ಅಭಿಯಾನದಲ್ಲಿ ರಾಜ್ಯದಲ್ಲಿರುವ ಎಲ್ಲಾ ಚಾಲಕ ಸಂಘಟನೆಗಳು, ಸಮಸ್ತ ಚಾಲಕರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಳಿಗೆ ಚಾಲಕರು ಮನೆಗಳಿಂದಲೇ ಹಣೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸೆಲ್ಪಿ ತೆಗೆದು ರವಾನಿಸಬೇಕು. ಎಲ್ಲಾ ಬಗೆಯ ಸಾಮಾಜಿಕ ಜಾಲತಾಣಗಳಿಗೆ
ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಚಾಲಕರು ಒಂದೂವರೆ ತಿಂಗಳಿನಿಂದ ಕೆಲಸವಿಲ್ಲದೇ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರತಿಯೊಬ್ಬ ಚಾಲಕರ ಖಾತೆಗೆ ಹತ್ತು ಸಾವಿರ ರೂ ಹಣವನ್ನು ಹಾಕುವಂತೆ ಕೇಳಿಕೊಂಡರೂ ಸ್ಫಂದಿಸಿಲ್ಲ. ಆದರೆ, ದೆಹಲಿಯ ಆಮ್ ಆದ್ಮಿ ಸರ್ಕಾರ, ಮಹಾರಾಷ್ಟ್ರದ ಶಿವಸೇನೆ – ಕಾಂಗ್ರೆಸ್ – ಎನ್.ಸಿ.ಪಿ ಸರ್ಕಾರ ಹಾಗೂ ಆಂಧ್ರ ಪ್ರದೇಶದ ವೈ.ಎಸ್.ಆರ್ ಕಾಂಗ್ರೆಸ್ ಸರ್ಕಾರ ಚಾಲಕರ ಖಾತೆಗಳಿಗೆ ಹತ್ತು ಸಾವಿರ ರೂ ಹಣ ಜಮಾ ಮಾಡಿ ಸಂಕಷ್ಟಕ್ಕೆ ಸ್ಪಂದಿಸಿದೆ. ಇದೇ ರೀತಿ ರಾಜ್ಯದಲ್ಲೂ ಚಾಲಕರಿಗೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದರೂ ಕ್ಯಾರೇ ಮಾಡಿಲ್ಲ ಎಂದು ಗಂಡಸಿ ಸದಾನಂದ ಸ್ವಾಮಿ ಹೇಳಿದ್ದಾರೆ.
ಇನ್ನೂ ಸಾರಿಗೆ ಇಲಾಖೆಯ ಜವಾಬ್ದಾರಿ ಹೊಂದಿರುವ ಉಪಮುಖ್ಯಮಂಎಂದರುತ್ರಿ ಲಕ್ಷ್ಮಣ ಸವದಿ ಅವರು ಏನು ಮಾಡುತ್ತಿದ್ದಾರೆ ಎಂದೇ ಗೊತ್ತಿಲ್ಲ. ಚಾಲಕರ ಸಮಸ್ಯೆಗಳಿಗೆ ನೆರವಾಗಬೇಕಾದವರು ಎಲ್ಲಿಗೆ ಹೋಗಿದ್ದಾರೆ. ಸಾರಿಗೆ ಸಚಿವರು ಸಂಕಷ್ಟ ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಪರಮ ನಿರ್ಲಕ್ಷ್ಯ ತೋರಿದ್ದಾರೆ ಎಂದರು.
ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಪಡಿತರ ಧಾನ್ಯವನ್ನು ನೀಡುತ್ತಿದ್ದಾರೆಯೆ ಹೊರತು ಸರ್ಕಾರದಿಂದ ಉಳಿದ ಚಾಲಕರಿಗೆ ಯಾವುದೇ ನೆರವಾಗುತ್ತಿಲ್ಲ. ನಮ್ಮ ಕಷ್ಟದ ಅಳಲನ್ನು ಕೇಳಿಸಿಕೊಂಡರೂ ಸ್ಪಂದಿಸುತ್ತಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಸುಮಾರು 218,288.000ಕ್ಕೂ ಹೆಚ್ಚು ಲಾರಿ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ವಾಣಿಜ್ಯ ಬಳಕೆ ವಾಹನಗಳ ಚಾಲಕರಿದ್ದಾರೆ. ಲಾಕ್ಡೌನ್ ಪರಿಸ್ಥಿತಿಯಲ್ಲಿ ಒಂದು ರೂಪಾಯಿ ದುಡಿಯಲು ನಮಗೆ ಸಾಧ್ಯವಾಗಿಲ್ಲ. ಮಕ್ಕಳ ವಿದ್ಯಾಭ್ಯಾಸ , ಸಾಲ ಪಾವತಿ ಸೇರಿದಂತೆ ಕುಟುಂಬ ನಿರ್ವಹಣೆ ಹೇಗೆ ಮಾಡುವುದು ಎಂಬ ಬಗ್ಗೆ ಚಿಂತೆಯಾಗಿದೆ. ಈಗಾಗಲೇ ಚಾಲಕರ ಸಂಘಟನೆಯ 120ಕ್ಕೂ ಹೆಚ್ಚು ಶಾಖೆಗಳಿಂದ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ನಮ್ಮ ಸಮಸ್ಯೆಗಳನ್ನು ವಿವರಿಸಿದ್ದೇವೆ. ಆದರೆ, ನಮಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ನ್ಯಾಯ ದೊರೆತಿಲ್ಲಎಂದು ತಿಳಿಸಿದ್ದಾರೆ.