ಬೆಂಗಳೂರು, ಎ.27 (DaijiworldNews/PY) : ಅಂತಾರಾಷ್ಟ್ರೀಯ ವಿಮಾನಯಾನ ಆರಂಭವಾದ ತಕ್ಷಣ ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಭಾರತಕ್ಕೆ ಕಳುಹಿಸಲಾಗುವುದು ಎಂದು ದುಬೈಯಲ್ಲಿನ ಭಾರತೀಯ ರಾಯಭಾರಿ ವಿಪುಲ್ ಷಾ ಅವರು ತಿಳಿಸಿದ್ದಾರೆ.
ಈ ಬಗ್ಗೆ ದುಬೈ ಅನಿವಾಸಿ ಕನ್ನಡಿಗರು ದುಬೈಯಲ್ಲಿರುವ ಕಾನ್ಸುಲೇಟ್ ಜನರಲ್ ವಿಪುಲ್ ಷಾ ಹಾಗೂ ಇತರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದರು.
ಯುಎಇನಲ್ಲಿರುವ ಅನಿವಾಸಿಗಳನ್ನು ವಿಮಾನಯಾನ ಪುನರಾರಂಭವಾದಾಗ ದೇಶಕ್ಕೆ ಕರೆಯಿಸಿಕೊಳ್ಳುವ ಬಗ್ಗೆ ಕೇಂದ್ರ ಸರ್ಕಾರ ಈವರೆಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ, ವಿದೇಶಾಂಗ ಸಚಿವಾಲಯ ಶೀಘ್ರವೇ ಅಂತಿಮ ತೀರ್ಮಾನಕ್ಕೆ ಬರಲಿದೆ ಎಂದೂ ಷಾ ಹೇಳಿದ್ದಾರೆ.
ತುರ್ತುಚಿಕಿತ್ಸೆ ಆವಶ್ಯಕತೆ ಇರುವವರಿಗೆ, ಕೆಲಸ ಕಳೆದುಕೊಂಡ ಅನಿವಾಸಿ ಭಾರತೀಯರಿಗೆ, ಗರ್ಭಿಣಿಯರಿಗೆ, ಹಿರಿಯರಿಗೆ ವಿಮಾನಯಾನ ಶುರುವಾದಾಗ ಪ್ರಥಮ ಆದ್ಯತೆ ನೀಡಬೇಕು ಎಂದು ದುಬಾೖ ಅನಿವಾಸಿ ಕನ್ನಡಿಗರ ಸಂಘದ ಅಧ್ಯಕ್ಷ, ಉದ್ಯಮಿ ನವೀದ್ ಮಾಗುಂಡಿ ತಿಳಿಸಿದರು. ವಿಪುಲ್ ಷಾ ಇದ ಕ್ಕೆ ಪ್ರತಿ ಕ್ರಿಯಿಸಿದ್ದು, ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದರು.
ಹಿದಾಯತ್ ಅಡೂರು ಅವರು ಐಸೊಲೇಶನ್ ವಾರ್ಡ್ ವ್ಯವಸ್ಥೆ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉದ್ಯಮಿ ಆಜಾದ್ ಮುಪೇನ್ ಒಡೆತನದ ಆಸ್ಪತ್ರೆಯಾದ ಆಸ್ಟರ್ ಗ್ರೂಪಿನಿಂದ ಹಲವಾರು ಡಾಕ್ಟರ್ ಹಾಗೂ ನರ್ಸ್ಗಳು ಭಾರತೀಯ ಅನಿವಾಸಿಗಳ ಒಕ್ಕೂಟ ದಿಂದ ಕ್ವಾರಂಟೈನ್ ಮಾಡಿರುವ ಸ್ಥಳಗಳಲ್ಲಿ ಸೇವೆ ಮಾಡುತ್ತಿದ್ದು, ಈ ಸಂದರ್ಭ ಯಾವುದೇ ಅನಿವಾಸಿ ಭಾರತೀಯರಿಗೆ ಕೊರೊನಾ ಸೋಂಕು ದೃಢಪಟ್ಟು ಐಸೊಲೇಶನ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ವಿಳಂಬವಾದರೆ ತಕ್ಷಣವೇ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಸಂಪರ್ಕಿಸಿ ಎಂದು ಹೇಳಿದರು.
ವಿಮಾನಯಾನ ಪ್ರಾರಂಭವಾದಾಗ ಭಾರತಕ್ಕೆ ಮರಳಲಿಚ್ಚಿಸುವ ಬಡ ಕಾರ್ಮಿಕರಿಗೆ ಉಚಿತವಾಗಿ ಟಿಕೆಟ್ನ ವ್ಯವಸ್ಥೆಯನ್ನು ಮಾಡಬೇಕು ಎಂದು ಶಾರ್ಜಾ ಕರ್ನಾಟಕ ಸಂಘದ ಪೋಷಕ ಹರೀಶ್ ಶೇರಿಗಾರ್ ಅವರು ಹೇಳಿದರು. ಹರೀಶ್ ಶೇರಿಗಾರ್ ಅವರ ಪ್ರಶ್ನೆಗೆ ಉತ್ತರಿಸಿದ ವಿಪುಲ್, ಅನುಕೂಲ ಒದಗಿಸಲು ನಾವು ಇಂಡಿಯನ್ ಕಮ್ಯೂನಿಟಿ ವೆಲ್ಫೇರ್ ಫಂಡ್ ಬಳಸುತ್ತೇವೆ. ಹಾಗೆಯೇ, ಭಾರತೀಯ ಉದ್ಯಮಿಗಳು, ಅನಿಉವಾಸಿ ಸಂಘಟನೆಗಳ ನೆರವು ಪಡೆದು ಹೆಚ್ಚಿನ ಭಾರತೀಯರಿಗೆ ವ್ಯವಸ್ಥೆ ಮಾಡಲು ಪ್ರಯತ್ನ ಮಾಡಕಾಗುವುದು ಎಂದು ತಿಳಿಸಿದರು.
ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಕರ್ನಾಟಕ ಎನ್ಆರ್ಐ ಫೋರಂನ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ, ಬಸವ ಸಮಿತಿ ದುಬಾೖ ಸಂಸ್ಥೆಯ ಪರವಾಗಿ ಚಂದ್ರಶೇಖರ್ ಲಿಂಗದ ಹಳ್ಳಿ, ಹಿದಾಯತ್ ಅಡೂರು, ಕರ್ನಾಟಕ ಸಂಘ ದುಬಾೖ ಪ್ರ. ಕಾರ್ಯದರ್ಶಿ ದಯಾ ಕಿರೋಡಿ ಯನ್, ಉದ್ಯಮಿ ರೊನಾಲ್ಡ್ ಮಾರ್ಟಿಸ್, ದುಬಾೖ ಅನಿವಾಸಿ ಕನ್ನಡಿಗರ ಸಂಘದ ಉಪಾಧ್ಯಕ್ಷ ಸುನಿಲ್ ಅಂಬಲತರೆ ವೀಡಿಯೋ ಕಾನ್ಫರೆನ್ಸ್ನಲ್ಲಿ ಭಾಗವಹಿಸಿದ್ದರು.