ಅಹಮದಾಬಾದ್, ಎ.27 (DaijiworldNews/PY) : ಕೊರೊನಾ ಸೋಂಕಿನಿಂದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಅಹಮದಾಬಾದ್ ಕಾರ್ಪೋರೇಟರ್ ಬದ್ರುದ್ದೀನ್ ಶೇಖ್ ಅವರು ಭಾನುವಾರ ಸಾವನ್ನಪ್ಪಿದ್ದಾರೆ.
ಕೊರೊನಾ ಸೋಂಕು ದೃಢಪಟ್ಟ ಬಳಿಕ ಅವರನ್ನು ಅಹಮದಾಬಾದ್ನಲ್ಲಿರುವ ಎಸ್ವಿಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎಂಟು ದಿನಗಳಿಂದ ಸೋಂಕಿನ ವಿರುದ್ದ ಹೋರಾಟ ನಡೆಸಿದ್ದರಾದರೂ, ಅವರು ಬದುಕುಳಿಯಲಿಲ್ಲ.
ಈ ಬಗ್ಗೆ ಕಾಂಗ್ರೆಸ್ ನಾಯಕ ಶಕ್ತಿಸಿನ್ಹ ಗೋಹಿಲ್ ಅವರು ಟ್ವಿಟ್ಟರ್ನಲ್ಲಿ ವಿಡಿಯೋ ಮಾಡಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ಗೆಳೆಯ ಬದ್ರುದ್ದೀನ್, ನಿಜವಾಗಿ ಕೊರೊನಾ ವಾರಿಯರ್. ಆತ ಗುಜರಾತಿನ ಅಹಮದಾಬಾದ್ನಲ್ಲಿ ಬಡ ಜನರಿಗೆ ನೆರವು ನೀಡಲು ಹೋಗಿದ್ದ ಸಂದರ್ಭ ಸೋಂಕು ತಗುಲಿತ್ತು. ಅವರ ಸಾವು ಗುಜರಾತ್ ಕಾಂಗ್ರೆಸ್ ಕುಟುಂಬಕ್ಕೆ ತುಂಬಲಾರದ ನಷ್ಟ. ಎಲ್ಲರಿಗೂ ಇದೊಂದು ಪಾಠವಾಗಲಿ. ದಯವಿಟ್ಟು ಎಲ್ಲರೂ ಮುಂಜಾಗ್ರತೆ ವಹಿಸಿ ಹಾಗೂ ಸ್ಥಳೀಯ ಆಡಳಿತದೊಂದಿಗೆ ಸಹಕರಿಸಿ ಎಂದು ಕೋರಿದ್ದಾರೆ.