ನವದೆಹಲಿ, ಎ.27 (DaijiworldNews/PY) : ದೇಶಾದ್ಯಂತ ಲಾಕ್ಡೌನ್ ಜಾರಿಯಾದ ನಂತರ, ಸುಪ್ರೀಂಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ಒಟ್ಟು 593 ಅರ್ಜಿಗಳ ವಿಚಾರಣೆ ನಡೆಸಿ, 215 ಪ್ರಕರಣಗಳಲ್ಲಿ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ ಎ.ಎ.24ರವರೆಗೆ ಒಟ್ಟು 17 ದಿನಗಳ ಕಾಲ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯನಿರ್ವಹಿಸಿದೆ. ಸಾಮಾನ್ಯ ದಿನಗಳನ್ನು ಹೋಲಿಕೆ ಮಾಡಿದರೆ ಈ ಸಂಖ್ಯೆ ಕಡಿಮೆಯಾಗಿದೆ. ಲಾಕ್ಡೌನ್ ನಂತರ ಇಷ್ಟೊಂದು ಅರ್ಜಿಗಳ ವಿಚಾರಣೆ ಮಾಡಿರುವುದು ಒಂದು ಉತ್ತಮವಾದ ಬೆಳವಣಿಗೆಯಾಗಿದೆ. ಸಾಮಾನ್ಯ ದಿನಗಳಲ್ಲಿ 17 ದಿನಗಳ ಅವಧಿಯಲ್ಲಿ ಕೋರ್ಟ್ ಸುಮಾರು ಅದು 3,500 ಅರ್ಜಿಗಳ ವಿಚಾರಣೆ ನಡೆಸುತ್ತಿದ್ದು, ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆ ಕೇವಲ ತುರ್ತು ಅರ್ಜಿಗಳನ್ನು ಮಾತ್ರವೇ ಕೋರ್ಟ್ ಕೈಗೆತ್ತಿಕೊಳ್ಳುತ್ತಿದೆ.
ಕೊರೊನಾ ಸೋಂಕು ವ್ಯಾಪಕವಾದ ನಿಟ್ಟಿನಲ್ಲಿ ಲಾಕ್ಡೌನ್ ಜಾರಿಗೊಳ್ಳುವು ಮೊದಲು ತಾತ್ಕಾಲಿಕವಾಗಿ ಸುಪ್ರೀಂಕೋರ್ಟ್ ಅನ್ನು ಮುಚ್ಚಲಾಗಿತ್ತು.