ನವದೆಹಲಿ, ಏ 27 (Daijiworld News/MSP): ಭಾರತ ಲಾಕ್ ಡೌನ್ ಮುಂದುವರಿಸಬೇಕೇ ಬೇಡವೇ ಎಂಬುದರ ಬಗ್ಗೆ ಹಾಗೂ ಕೊರೊನಾ ತಡೆಗಟ್ಟುವ ಕುರಿತು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಡೀಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ್ದು, ಈ ವೇಳೆ ಕೊರೊನಾ ಹಾಟ್ ಸ್ಪಾಟ್ ಗಳಲ್ಲಿ ಮೇ 3ರ ನಂತರವೂ ಲಾಕ್ ಡೌನ್ ಮುಂದುವರಿಸುವ ಸುಳಿವು ನೀಡಿದ್ದಾರೆ.
ರಾಜ್ಯಗಳ ಅಭಿಪ್ರಾಯ ಸಂಗ್ರಹದ ವಿಚಾರವಾಗಿ 9 ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದು, ಈ ವೇಳೆ ನಾಲ್ವರು ಸಿಎಂ ಲಾಕ್ ಡೌನ್ ಮುಂದುವರಿಸಬೇಕೆಂದು ಸಲಹೆ ನೀಡಿದ್ರೆ ಇನ್ನುಳಿದ ಐದು ರಾಜ್ಯಗಳ ಮುಖ್ಯಮಂತ್ರಿಗಳು ಮೇ3ರ ನಂತರ ಲಾಕ್ ಡೌನ್ ಸಡಿಲಗೊಳಿಸಬೇಕು ಎಂದು ಹೇಳಿದ್ದಾರೆ.
ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಆತಂಕ, ಭಯಪಡುವ ಅಗತ್ಯವಿಲ್ಲ, ನಮ್ಮ ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಸದ್ಯ ನಮ್ಮೆಲ್ಲರ ಗುರಿ ಕೊರೊನಾ ವೈರಸ್ ತಡೆಗಟ್ಟುವುದರ ಬಗ್ಗೆ ಇರಲಿ, ಸದ್ಯ ರಾಜ್ಯ ಸರ್ಕಾರಗಳು ಹಂತಹಂತವಾಗಿ ಲಾಕ್ ಡೌನ್ ಸಡಿಲಗೊಳಿಸುವ ನೀತಿಯನ್ನು ಸಿದ್ದಪಡಿಸುವಂತೆ ತಿಳಿಸಿದ್ದಾರೆ.
ಮಾತ್ರವಲ್ಲದೆ ರೆಡ್ ಜೋನ್ ಗಳನ್ನು ಆರೆಂಜ್ ಮತ್ತು ಅದರ ನಂತರ ಗ್ರೀನ್ ಜೋನ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ ಎಲ್ಲಾ ರಾಜ್ಯಸರ್ಕಾರಗಳು ಶ್ರಮವಹಿಸಬೇಕಾಗಿದೆ ಎಂದಿದ್ದಾರೆ