ನವದೆಹಲಿ, ಏ 28 (Daijiworld News/MSP):ಚೀನಾದಿಂದ ತರಿಸಿಕೊಳ್ಳಲಾಗಿದ್ದಂತ ಕೊರೋನಾ ಪಿಪಿಇ ಕಿಟ್ ಕಳಪೆ ಗುಣಮಟ್ಟದಿಂದ ಕೂಡಿದ್ದ ಕಾರಣ, ಈಗಾಗಲೇ ಕೇಂದ್ರ ಸರ್ಕಾರ ಪಿಪಿಇ ಕಿಟ್ ಖರೀದಿ ಸ್ಥಗಿತಗೊಳಿಸಿತ್ತು. ಇದೀಗ ಪಿಪಿಇ ಕಿಟ್ ಗಳ ಸರದಿ. ಚೀನದ ಎರಡು ಕಂಪನಿಗಳು ತಯಾರಿಸುರುವ ರ್ಯಾಪಿಡ್ ಕೊರೊನಾ ಪರೀಕ್ಷಾ ಕಿಟ್ ಗಳು ದೋಷಪೂರಿತವಾಗಿದ್ದು, ಅವುಗಳನ್ನು ಬಳಸಬಾರದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ , ರಾಜ್ಯ ಸರ್ಕಾರ ಮತ್ತು ಆಸ್ಪತ್ರೆಗಳಿಗೆ ಸೋಮವಾರ ಸೂಚನೆ ನೀಡಿದೆ.
ಚೀನಾದಿಂದ ಆಮದು ಮಾಡಿಕೊಳ್ಳಲಾಗಿದ್ದಂತ ಕೊರೋನಾ ಪಿಪಿಇ ಕಿಟ್ ಕಳಪೆ ಗುಣಟ್ಟದಿಂದ ಕೂಡಿದ್ದು ಪತ್ತೆಯಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ಕೂಡ ಆಮದನ್ನು ನಿಲ್ಲಿಸಿತ್ತು. ಇಂದು ಇದೇ ವಿಚಾರವಾಗಿ ಐಸಿಎಂಆರ್ ಕೂಡ ಚೀನಾ ಕಿಟ್ ಗಳಿಗೆ ನಿಷೇಧ ಹೇರುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಗುವಾಂಗ್ ಝೌ ವೋಂಡ್ಪೋ ಮತ್ತು ಝುಹೈ ಲಿವ್ಹಾನ್ ಡಯಾಗ್ನಾಸ್ಟಿಕ್ಸ್ ಎಂಬ ಈ ಎರಡು ಕಂಪನಿಗಳಿಗಳ ಕಿಟ್ ಗಳನ್ನು ಕೊರೊನಾ ಪೀಡಿತರ ಪರೀಕ್ಷೆಗೆ ಉಪಯೋಗಿಸಬೇಡಿ ಎಂದು ಹೇಳಿದೆ. ಎರಡು ಕಂಪನಿಗಳಿಗೆ ನೀಡಿದ್ದ ಎಲ್ಲಾ ಆರ್ಡರ್ ರದ್ದು ಮಾಡಿದೆ. ಕಿಟ್ ಗಳಿಗೆ ಹಣ ಪಾವತಿಸಿಲ್ಲ ಭಾರತ ಸರ್ಕಾರದ ಬೊಕ್ಕಸಕ್ಕೆ ಒಂದು ರೂಪಾಯಿ ನಷ್ಟವಾಗಿಲ್ಲ ಎಂದು ಐಸಿಎಂಆರ್ ತಿಳಿಸಿದೆ.