ಗುಜರಾತ್, ಏ 28 (Daijiworld News/MSP): ಮಾರಕ ಕೊರೊನಾ ವೈರಸ್ ನ ಔಷಧಿಗಾಗಿ ವಿಶ್ವವೇ ಪ್ರಯತ್ನಿಸುತ್ತಿದ್ದರೆ, ಇತ್ತ ಗುಜರಾತ್ ರಾಜ್ಯದಲ್ಲಿ ಮೊದಲ ಬಾರಿಗೆ ಕೊರೋನಾ ವೈರಸ್ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಲು ಮುಂದಾಗಿದೆ.
ದೇಶದ ಹಲವಾರು ಆಯುರ್ವೇದ ತಜ್ಞರು ಕೋವಿಡ್ -19 ವೈರಸ್ ಗೆ ಆಯುರ್ವೇದದಲ್ಲಿ ಔಷಧಿ ಇದೆ ಎಂದು ಹೇಳಿದ್ದರು. ಇದೇ ವಿಚಾರವಾಗಿ ಕೇಂದ್ರ ಆಯುಷ್ ಇಲಾಖೆ ಕೂಡ ಕೊರೋನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡುವ ಸಕಾರಾತ್ಮಕ ಮಾತುಗಳನ್ನಾಡಿತ್ತು. ಇದರ ಬೆನ್ನಲ್ಲೇ ಇದೀಗ ಗುಜರಾತ್ ಸರ್ಕಾರ ತನ್ನ ರಾಜ್ಯದಲ್ಲಿ ಕೊರೋನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಲು ಮುಂದಾಗಿದೆ.
ಗುಜರಾತ್ ನಲ್ಲಿ ಆಯ್ದು ಕೊರೊನಾ ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಲು ಸರ್ಕಾರ ನಿರ್ಧರಿಸಿದೆ. ಕೊರೊನಾ ಹಾಟ್ ಸ್ಪಾಟ್ ಅಹಮದಾಬಾದ್ ನಲ್ಲಿ ಲಕ್ಷಣ ರಹಿತ ಸುಮಾರು 75 ಕೊರೊನಾ ಸೋಂಕಿತರ ಚೇತರಿಕೆ ಸಮಯ ನಿಗದಿ ಆಧರಿಸಿ ಚಿಕಿತ್ಸೆ ನೀಡಲಾಗುವುದು ಎಂದು ರಾಜ್ಯ ಆಯುಷ್ ಇಲಾಖೆ ತಿಳಿಸಿದೆ.
ಕೊರೊನಾ ಸೋಂಕಿತರಾಗಿದ್ದು ಆರೋಗ್ಯವಂತರಾಗಿರುವಮೇಲೆ ಈ ಆಯುರ್ವೇದ ಔಷಧಿ ಪ್ರಯೋಗ ನಡೆಸಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಆ ಮೂಲಕ ಕೊರೋನಾ ಸೋಂಕಿತರ ಮೇಲೆ ಆಯುರ್ವೇದ ಔಷಧಿ ಎಷ್ಟರ ಮಟ್ಟಿಗೆ ಮತ್ತು ಎಷ್ಟು ದಿನಗಳಲ್ಲಿ ತನ್ನ ಪರಿಣಾಮ ಬೀರಲಿದೆ. ಆಯುರ್ವೇದ ಔಷಧದಿಂದ ಸೋಂಕಿತ ಎಷ್ಟರ ಮಟ್ಟಿಗೆ ಗುಣಮುಖನಾಗುತ್ತಾನೆ. ಆತನ ಮೇಲೆ ಔಷಧಿ ಯಾವೆಲ್ಲಾ ಪರಿಣಾಮ ಬೀರುತ್ತದೆ ಎಂಬುದನ್ನು ತಜ್ಞರು ಅಧ್ಯಯನ ನಡೆಸಲಿದ್ದಾರೆ.
ಇದಲ್ಲದೆ ದೈಹಿಕ ಕ್ಷಮತೆ ವೃದ್ದಿಸುವ ಹಿತದೃಷ್ಟಿಯಿಂದ ಗುಜರಾತ್ ನಲ್ಲಿ ಸುಮಾರು 1.26 ಕೋಟಿ ಜನರಿಗೆ ಉಕಾಲ ಅಮೃತ್ ಪೇಯ್ ಎಂಬ ಆಯುರ್ವೇದ ಔಷಧವನ್ನು ಉಚಿತವಾಗಿ ವಿತರಿಸಲಾಗಿದೆ. .