ಬುಲಂದ್ಶಹರ್, ಎ.28 (Daijiworld News/MB) : ಇಬ್ಬರು ಸಾಧುಗಳ ಮೃತದೇಹ ಉತ್ತರ ಪ್ರದೇಶದ ಬುಲಂದ್ಶಹರ್ನ ಪಾಗೊನಾ ಗ್ರಾಮದ ಶಿವ ದೇಗುಲದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ಜಗನ್ದಾಸ್ (55) ಮತ್ತು ಸೇವಾದಾಸ್ (35) ಎಂದು ಗುರುತಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ಜನರು ದೇಗುಲಕ್ಕೆ ಹೋದ ಸಂದರ್ಭದಲ್ಲಿ ರಕ್ತಮಯವಾದ ದೇಹಗಳನ್ನು ನೋಡಿ ನಮಗೆ ತಿಳಿಸಿದ್ದಾರೆ. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಇನ್ನಷ್ಟೇ ಬರಬೇಕಿದೆ. ಘಟನೆಗೆ ಸಂಬಂಧಿಸಿ ಓರ್ವನನ್ನು ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯು ಸಾಧುಗಳಿಂದ ಒಂದು ಲೇಖನವನ್ನು ಕಳವು ಮಾಡಿದ್ದು ಅವರೊಂದಿಗೆ ಗಲಾಟೆ ಮಾಡಿದ್ದ ಎಂದು ಹೇಳಲಾಗಿದೆ.
ಇನ್ನು ಮುಖ್ಯಮಂತ್ರಿ ಆದಿತ್ಯನಾಥ್ ಅವರು ಘಟನಾ ಸ್ಥಳಕ್ಕೆ ತೆರಳಿ ಮಾಹಿತಿ ನೀಡಿ ಎಂದು ಬುಲಂದ್ಶಹರ್ ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇತ್ತಿಚೆಗೆ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ಗ್ರಾಮವೊಂದರ ಜನರು ಇಬ್ಬರು ಸಾಧುಗಳು ಸೇರಿದಂತೆ ಮೂವರನ್ನು ಪೊಲೀಸರ ಎದುರಲ್ಲೇ ದೊಣ್ಣೆಯಿಂದ ಹೊಡೆದು ಹತ್ಯೆ ಮಾಡಿದ್ದು ಈ ಸಂಬಂಧ ಪೊಲೀಸರು 101 ಜನರನ್ನು ಬಂಧನ ಮಾಡಿದ್ದಾರೆ.