ನವದೆಹಲಿ, ಏ 29 (Daijiworld News/MSP): ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನಾಪಡೆ ಭಯೋತ್ಪಾದಕರ ವಿರುದ್ಧ ಸಮರ ಸಾರಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಜಿಯಾನಾಪೊರಾ ಎಂಬ ಪ್ರದೇಶದಲ್ಲಿ ಭಯೋತ್ಪಾದಕರು ಹೊಂಚು ಹಾಕಿ ಅದಗಿದ್ದ ಮಾಹಿತಿ ಅರಿತ ಭಾರತೀಯ ಸೇನಾಪಡೆ, ಕಾಶ್ಮೀರ ಪೊಲೀಸರು, 55 ಆರ್ಆರ್ ರಾಷ್ಟ್ರೀಯ ರೈಫಲ್ಸ್, ಸಿಆರ್'ಪಿಎಫ್ ಯೋಧರು ಜಂಟಿಯಾಗಿ ಕಳೆದ ರಾತ್ರಿಯಿಂದಲೂ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದರು.
ಈ ವೇಳೆ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರನ್ನು ಮಟ್ಟಹಾಕಿದ ಸೇನಾಪಡೆ ಇಬ್ಬರು ಉಗ್ರರ ಭೇಟೆಯಾಡಿದ್ದಾರೆ. ಸ್ಥಳದಲ್ಲಿ ಮತ್ತೊಬ್ಬ ಉಗ್ರ ಅಡಗಿ ಕುಳಿತಿರುವ ಶಂಕೆಗಳು ವ್ಯಕ್ತವಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ