ಛತ್ತೀಸ್ಗಢ, ಏ 29 (Daijiworld News/MSP): ಛತ್ತೀಸ್ಗಢದಲ್ಲಿನ ನಾರಾಯಣಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ನಕ್ಸಲರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್ ನನ್ನು ಹತ್ಯೆ ಮಾಡಲಾಗಿದ್ದು ಈ ವೇಳೆ ಇಬ್ಬರು ಸಿಬ್ಬಂದಿಗಳಿಗೆ ತೀವ್ರತರದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
" ಬುಧವಾರ ಬೆಳಿಗ್ಗೆ 8.15 ರ ಸುಮಾರಿಗೆ ಛೋಟೆ ಡೋಂಗರ್ ಪೊಲೀಸ್ ಠಾಣೆ ವ್ಯಾಪ್ತಿತ ಕರೆಮೆಟ್ಟಾ ಬಳಿ ಈ ಎನ್ ಕೌಂಟರ್ ನಡೆದಿದ್ದು, ನಕ್ಸಲರು ಐಇಡಿಗಳನ್ನು ಬಳಿಸಿ ಸ್ಪೋಟ ನಡೆಸಿ ಗಸ್ತು ತಿರುಗುತ್ತಿದ್ದ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ" ಎಂದು ನಾರಾಯಣಪುರ ಪೊಲೀಸ್ ವರಿಷ್ಠಾಧಿಕಾರಿ ಮೋಹಿತ್ ಗರ್ಗ್ ಹೇಳಿದ್ದಾರೆ.
"ಗುಂಡಿನ ಚಕಮಕಿಯಲ್ಲಿ ಹತ್ಯೆಗೀಡಾದ ಮಹಿಳಾ ನಕ್ಸಲ್ ಶವ ಸೇರಿದಂತೆ ಒಂದು ಎಸ್ಎಲ್ಆರ್ ರೈಫಲ್ ಮತ್ತು ಒಂದು 12 ಬೋರ್ ರೈಫಲ್ ಅನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ" ಎಂದು ಗಾರ್ಗ್ ಹೇಳಿದ್ದಾರೆ.
ಇನ್ನು ಗಾಯಗೊಂಡ ಸಿಬ್ಬಂದಿಯಲ್ಲಿ ಓರ್ವ ಜಿಲ್ಲಾ ರಿಸರ್ವ್ ಗ್ರೂಪ್ ಡಿಆರ್ಜಿಗೆ ಸೇರಿದವರಾಗಿದ್ದರೆ, ಇನ್ನೊಬ್ಬರು ಛತ್ತೀಸ್ ಗಢ್ ನ ಸಶಸ್ತ್ರ ಪಡೆಗೆ ಸೇರಿದವರಾಗಿದ್ದು ಗಾಯಗೊಂಡ ಇಬ್ಬರು ಸ್ಥಿಬ್ಬಂದಿಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.