ನವದೆಹಲಿ, ಎ.29 (DaijiworldNews/PY) : ರಾಹುಲ್ ಗಾಂಧಿ ಅವರು ಚಿದಂಬರಂ ಅವರಂಥವರಿಂದ ಟ್ಯೂಷನ್ ತೆಗೆದುಕೊಳ್ಳಬೇಕಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಕೇಂಧ್ರ ಸರ್ಕಾರವು ಉದ್ಯಮಿಗಳ ಸಾಲ ಮನ್ನಾ ಮಾಡಿದೆ ಎಂಬ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಚಿದಂಬರಂ ಅವರಂಥವರಿಂದ ರಾಹುಲ್ ಗಾಂಧಿ ಟ್ಯೂಷನ್ ತೆಗೆದುಕೊಳ್ಳಬೇಕಿದೆ. ಎರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಮೋದಿ ಸರ್ಕಾರವು 65,000 ರೂ. ಸಾಲ ಮನ್ನಾ ಮಾಡಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ವ್ಯಂಗ್ಯ ಮಾಡಿರುವ ಜಾವಡೇಕರ್ ಅವರು, ಸಾಲ ಮನ್ನಾ ಮಾಡುವುದು ಬೇರೆ, ಅದನ್ನು ಲೆಕ್ಕದ ಪುಸ್ತಕಗಳಿಂದ ತೆಗೆದುಹಾಕುವುದು ಬೇರೆ ಎಂದರು.