ಕಲಬುರಗಿ, ಎ.29 (Daijiworld News/MB) : ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಲ್ಲೇ ಇದ್ದು ಬುಧವಾರ ಒಂದೇ ದಿನ ನಾಲ್ಕು ವರ್ಷದ ಹೆಣ್ಣು ಮಗು ಸೇರಿ ಎಂಟು ಜನರ ಕೊರೊನಾ ವರದಿ ಪಾಸಿಟಿವ್ ಬಂದಿದ್ದು ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಇಷ್ಟು ಪ್ರಕರಣಗಳು ಪತ್ತೆಯಾಗಿದೆ.
ರಾಜ್ಯದಲ್ಲಿ ಇಂದು 9 ಪ್ರಕರಣಗಳು ದೃಢಪಟ್ಟಿದ್ದು ಆ ಪೈಕಿ ಎಂಟು ಪ್ರಕರಣ ಕಲಬುರಗಿಯಲ್ಲಿ ಹಾಗೂ ಒಂದು ಪ್ರಕರಣ ಬೆಳಗಾವಿ (ಹುಕ್ಕೇರಿ)ಯಲ್ಲಿ ದೃಢಪಟ್ಟಿದೆ.
ನಾಲ್ಕೂವರೆ ವರ್ಷದ ಹೆಣ್ಣು ಮಗು (ಪಿ-525), 14 ವರ್ಷ (ಪಿ-527), 12 ವರ್ಷ (ಪಿ-532) ಮತ್ತು 17 ವರ್ಷದ ಬಾಲಕಿಯರು (ಪಿ-531) ಸೇರಿದಂತೆ 40 ವರ್ಷದ ಮಹಿಳೆ (ಪಿ-529) ಮತ್ತು 20 ವರ್ಷ (ಪಿ-530), 22 ವರ್ಷ (ಪಿ-528) ಹಾಗೂ 28 ವರ್ಷದ ಯುವಕನಿಗೆ (ಪಿ-528) ಕೊರೊನಾ ಪಾಸಿಟಿವ್ ಆಗಿದೆ.
ಈ ಸೋಂಕಿತರೆಲ್ಲರೂ ಕೊರೊನಾ ಸೋಂಕಿನಿಂದ ಮೃತಪಟ್ಟ 55 ವರ್ಷದ ಬಟ್ಟೆ ವ್ಯಾಪಾರಿ ಸಂಪರ್ಕಕ್ಕೆ ಬಂದಿದ್ದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.