ಬೆಂಗಳೂರು, ಏ 29 (Daijiworld News/MSP): ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಹಾಗೂ ಉದ್ಯಮಿ ವಿಜಯ್ ಮಲ್ಯ ಸೇರಿದಂತೆ, ದೇಶದ ಸುಮಾರು ೫೦ ಉದ್ಯಮಿಗಳ ೬೮,೬೦೭ ಕೋಟಿ ರೂ.ಸಾಲವನ್ನು ಆರ್ ಬಿ ಐ ತಾಂತ್ರಿಕವಾಗಿ ಸಾಲಾ ಮನ್ನಾ ಮಾಡಿರುವ ವಿಚಾರವನ್ನು ವಿರೋಧಿಸಿ ರಾಜ್ಯ ಕಾಂಗ್ರಸ್ ನಿಂದ ಬೆಂಗಳೂರಿನಲ್ಲಿ ಮೌನ ಧರಣಿ ನಡೆಸಿತು.
ಕೇಂದ್ರ ಸರ್ಕಾರವೂ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸಿಲ್ಲ, ಆದರೆ ಬಾಬಾ ರಾಮ್ ದೇವ್, ಮೆಹುಲ್ ಚೋಕ್ಸಿ, ವಿಜಯ್ ಮಲ್ಯ ಮುಂತಾದವರ ಸಾಲ ಮನ್ನಾ ಮಾಡಿದೆ ಎಂದು ಉದ್ಯಮಿಗಳ ಫೋಸ್ಟರ್ ಹಿಡಿದುಕೊಂಡು ಮೌನ ಪ್ರತಿಭಟನೆ ನಡೇಸಿದೆ.
ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ನಿಂದಾಗಿ ದೇಶವು ಆರ್ಥಿಕ ಸಂಕಷ್ಟದಲ್ಲಿರುವಾಗ 68 ಸಾವಿರ ಕೋಟಿ ಸಾಲ ಮನ್ನಾಮಾಡಿದ್ದೇಕೆ? ಜನಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ. ಆದರೆ ಜನಸಾಮಾನ್ಯರ ನೋವಿಗೆ, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಆದರೆ ಉದ್ಯಮಿಗಳ ಪರವಾಗಿ ಸರ್ಕಾರ ವರ್ತಿಸುತ್ತಿದೆ ಎಂದು ಪ್ರತಿಭಟನೆಯ ವೇಳೆ ಕಾಂಗ್ರೆಸ್ ಮುಖಂಡ ಮನೋಹರ್ ಆರೋಪಿಸಿದರು.
ಚೋಕ್ಸಿ , ಮಲ್ಯ ಸಾಲ ಮನ್ನಾದ ಬಗ್ಗೆ ದೇಶದ ಪ್ರಧಾನಿ ಮೋದಿ ಮೌನ್ ವಹಿಸಿರುವುದೇಕೆ ? ಈ ವಿಚಾರವಾಗಿ ದೇಶದ ಜನತೆಗೆ ಸತ್ಯ ಹೇಳಬೇಕು. ಜನ ಸಾಮಾನ್ಯರ ಪರವಿಲ್ಲದೆ, ದೇಶಕ್ಕೆ ದ್ರೋಹ ಬಗೆದಿರುವ ಅವರು ರಾಜಿನಾಮೆ ನೀಡಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.