ನವದೆಹಲಿ, ಎ.29 (Daijiworld News/MB) : ಕೊರೊನಾ ವೈರಸ್ ಲಾಕ್ಡೌನ್ ಹಿನ್ನಲೆಯಲ್ಲಿ ಬಾಕಿಯಾಗಿರುವ 10 ಹಾಗೂ 12ನೇ ತರಗತಿಯ ಸಿಬಿಎಸ್ಇ ಪರೀಕ್ಷೆಗಳನ್ನು ಲಾಕ್ಡೌನ್ ತೆರವುಗೊಳಿಸಿದ ಬಳಿಕ ನಡೆಸಲು ಸಿದ್ಧ ಎಂದು ಸಿಬಿಎಸ್ಇ ಬುಧವಾರ ಹೇಳಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಿಬಿಎಸ್ಇ, ಮೊದಲು 10 ಹಾಗೂ 12ನೇ ತರಗತಿಯ ಉಳಿದ 29 ವಿಷಯಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ನಡೆಸುವ ಕನಿಷ್ಢ 10 ದಿನಗಳ ಮೊದಲೇ ವಿದ್ಯಾರ್ಥಿಗಳಿಗೆ ನೊಟೀಸ್ ನೀಡಲಾಗುತ್ತದೆ ಎಂದು ತಿಳಿಸಿದೆ ಎಂದು ವರದಿಯಾಗಿದೆ.
ಹಾಗೆಯೇ ಈಗಾಗಲೇ ಎಲ್ಲಾ ರಾಜ್ಯಗಳಲ್ಲಿ ನಡೆದಿರುವ ಪರೀಕ್ಷೆಗಳ ವೌಲ್ಯಮಾಪನ ಆರಂಭ ಮಾಡುವಂತೆ ಮಾನವ ಸಂಪನ್ಮೂಲ ಸಚಿವಾಲಯ ಆದೇಶಿಸಿದೆ.
10 ನೇ ತರಗತಿ ಸಿಬಿಎಸ್ಇ ಬೋರ್ಡ್ ಪರೀಕ್ಷೆಯ ಬಗ್ಗೆ ಹಲವು ಊಹಾಪೋಹ ಸುದ್ದಿಗಳು ಹರಿದಾಡಿದೆ. 10 ಹಾಗೂ 12 ನೇ ತರಗತಿಯ 29 ವಿಷಯಗಳಿಗೆ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದಾಗಿ ಈ ಮೊದಲೇ ಎಪ್ರಿಲ್ 1 ರಲ್ಲಿ ಹೇಳಿದ ಸುತ್ತೋಲೆಯಂತೆಯೇ ಇರಲಿದೆ ಎಂದು ತಿಳಿಸಿದೆ.