ನವದೆಹಲಿ, ಎ.30 (Daijiworld News/MB) : ಕೊರೊನಾ ವೈರಸ್ ಅಟ್ಟಹಾಸ ವಿಶ್ವದಾದ್ಯಂತ ಹೆಚ್ಚುತ್ತಲ್ಲೇ ಇದ್ದು ಈ ನಡುವೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕಚೇರಿ ವೈಟ್ ಹೌಸ್ ಟ್ವೀಟ್ ಖಾತೆ ಭಾರತದ ಪ್ರಧಾನಿಗಳ ಕಚೇರಿ, ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಕಚೇರಿಯ ಅಧಿಕೃತ ಟ್ವಿಟರ್ ಖಾತೆಗಳನ್ನು ಅನ್ ಫಾಲೋ ಮಾಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಏಪ್ರಿಲ್ 10 ರಂದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟರ್ ಖಾತೆಯನ್ನು ಯುಎಸ್ನ ಅಧಿಕೃತ ಟ್ವೀಟರ್ ಖಾತೆ ಫಾಲೋ ಮಾಡಿದ್ದು ವಿಶ್ವದಲ್ಲೇ ಯುಎಸ್ನ ಅಧಿಕೃತ ಟ್ವೀಟರ್ ಖಾತೆಯಿಂದ ಫಾಲೋ ಮಾಡಲ್ಪಟ್ಟ ಏಕೈಕ ನಾಯಕ ಮೋದಿಯವರಾಗಿದ್ದರು.
ಆ ಬಳಿಕ ವೈಟ್ ಹೌಸ್ ಅಮೆರಿಕ ದೇಶದಲ್ಲದ ಒಟ್ಟು 19 ಟ್ವಿಟ್ಟರ್ ಖಾತೆಗಳನ್ನು ಫಾಲೋ ಮಾಡಲು ಆರಂಭಿಸಿತ್ತು, ಆದರೆ ಇದೀಗ 13 ಖಾತೆಗಳನ್ನು ಮಾತ್ರ ಫಾಲೋ ಮಾಡುತ್ತಿದ್ದು ಭಾರತದ ಪ್ರಧಾನಿಗಳ ಕಚೇರಿ, ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಕಚೇರಿಯ ಅಧಿಕೃತ ಟ್ವಿಟರ್ ಖಾತೆಗಳನ್ನು ಅನ್ ಫಾಲೋ ಮಾಡಿದೆ.
ಇನ್ನು ಅನ್ ಫಾಲೋ ಮಾಡುವ ಮೊದಲು ಭಾರತಕ್ಕೆ ಸಂಬಂಧಿಸಿದ ಹೈಡ್ರಾಕ್ಸಿಕ್ಲೋರೋಕ್ವಿನ್ ರಫ್ತು ವಿಷಯದಲ್ಲಿ ಟ್ವೀಟ್ ಮಾಡಲಾಗಿದ್ದು ರಫ್ತಿಗೆ ಅನುಮತಿ ನೀಡಿದ ಬಳಿಕ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸಿ ಟ್ವೀಟ್ ಮಾಡಿದ್ದರು.
ಇದಾದ 2 ದಿನಗಳ ನಂತರ ವೈಟ್ಹೌಸ್ನ ಅಧಿಕೃತ ಟ್ವೀಟರ್ ಖಾತೆ ಭಾರತೀಯ ಖಾತೆಗಳನ್ನು ಫಾಲೋ ಮಾಡಲು ಆರಂಭಿಸಿತ್ತು.