ತಿರುವನಂತಪುರ, ಎ.30 (Daijiworld News/MB) : ಈ ಮೊದಲು ಕೊರೊನಾ ವಿರುದ್ಧದ ಹೋರಾಟಕ್ಕೆ 20000 ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದ್ದ ಕೇರಳ ಸರ್ಕಾರ ಇದೀಗ ಸರ್ಕಾರಿ ನೌಕರರ ವೇತನ ತಡೆಹಿಡಿಯಲು ನಿರ್ಧರಿಸಿದೆ.
ಒಂದು ವರ್ಷ ಕಾಲ ಸಚಿವರು ಹಾಗೂ ಶಾಸಕರ ವೇತನ, ಭತ್ಯೆ ಮತ್ತು ಗೌರವಧನದ ಶೇ.30 ಭಾಗಕ್ಕೆ ಕತ್ತರಿ ಹಾಕಲಾಗುತ್ತದೆ. ಆದರೆ ಆ ಮುಂದೂಡಿಕೆ ಮಾಡಲಾದ ವೇತನವನ್ನು ಯಾವಾಗ ಪಾವತಿಸಲಾಗುತ್ತದೆ ಎಂಬ ಕುರಿತಾಗಿ ಈವರೆಗೂ ಕೇರಳ ಸರ್ಕಾರ ತಿಳಿಸಿಲ್ಲ ಎಂದು ವರದಿಯಾಗಿದೆ.
ಈ ಮೊದಲು ಸರ್ಕಾರಿ ನೌಕರರ ಪ್ರತಿ ತಿಂಗಳ ಆರು ದಿನಗಳ ವೇತನವನ್ನು ಐದು ತಿಂಗಳ ಕಾಲ ಕಡಿತ ಮಾಡುವ ಕೇರಳ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿತ್ತು.