ಬೆಂಗಳೂರು, ಎ.30 (Daijiworld News/MB) : ಕೊರೊನಾ ನಿಯಂತ್ರಣದ ವಿಚಾರದಲ್ಲಿ ಕೇರಳ ಮಾದರಿಯನ್ನು ಅನುಸರಣೆ ಮಾಡಬೇಕೆಂಬ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ ಕೇರಳದಲ್ಲಿ ಕೊರೊನಾ ಪ್ರಕರಣಗಳ ಪರಿಸ್ಥಿತಿ ಗಂಭೀರವಾಗಿದೆ. ಈಡೀ ರಾಜ್ಯವೇ ಅಪಾಯಕಾರಿ ಸ್ಥಿತಿಗೆ ತಲುಪಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೇಳಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಇಡುಕ್ಕಿ, ಕೊಟ್ಟಾಯಂ, ಕೊಲ್ಲಂ, ತಿರುವನಂತಪುರಂ ಜಿಲ್ಲೆಗಳಲ್ಲಿ ಕೋವಿಡ್ನ ಹೊಸ ಪ್ರಕರಣಗಳು ವರದಿಯಾಗಿದೆ. ಬಹುತೇಕ ಇಡೀ ರಾಜ್ಯವೇ ಕೆಂಪು ವಲಯವಾಗಿ ಪರಿವರ್ತನೆಗೊಂಡಿದೆ ಎಂದಿದ್ದಾರೆ.
ಆರಂಭದಲ್ಲಿ ಕೇರಳ ಸರ್ಕಾರ ಘೋಷಿಸಿದ್ದ ₹ 20,000 ಕೋಟಿ ಪ್ಯಾಕೇಜ್ ಗಾಳಿಯಲ್ಲಿ ತೂರಿ ಹೋಗಿದೆಯೇ? ಸರ್ಕಾರಿ ನೌಕರರ ಸಂಬಳವನ್ನು ತಡೆ ಹಿಡಿದಿದೆ. ಈ ರೀತಿ ಸಂಬಳ ತಡೆ ಹಿಡಿದಿರುವ ಮೊದಲ ರಾಜ್ಯ ಕೇರಳ ಎಂದು ಹೇಳಿದ್ದಾರೆ.
ಬುಧವಾರ ನಾಲ್ಕು ಪಾಸಿಟಿವ್ ಆಗಿದೆ. 25 ಪ್ರಕರಣಗಳಲ್ಲಿ ಮರು ಪರೀಕ್ಷೆಗೆ ಕಳುಹಿಸಲಾಗಿದೆ ಯಾಕೆ. ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕೇರಳ ಘಟಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಟೀಕೆ ಮಾಡಿ ಪತ್ರ ಬರೆದಿದೆ. ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ರಾಜ್ಯದ ಹಣಕಾಸು ಸ್ಥಿತಿ ಹದಗೆಟ್ಟಿದೆ ಎಂದು ಹೇಳಿದ್ದಾರೆ. ಹಾಗಿರುವಾಗ ಪ್ಯಾಕೇಜ್ ಘೋಷಿಣೆ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ 55,504 ಪರೀಕ್ಷೆ ನಡೆಸಲಾಗಿದ್ದು 534 ಪಾಸಿಟಿವ್ ಆಗಿದೆ. ಕೇರಳವು 23,980 ಪರೀಕ್ಷೆ ನಡೆಸಿದ್ದು 2 ಲಕ್ಷ ಪರೀಕ್ಷೆ ಮಾಡಿದ್ದೇವೆ ಎಂದು ಘೋಷಿಸಿದೆ. ಕಿಟ್ ಎಲ್ಲಿದೆ?. ಕೇರಳದಲ್ಲಿ ದೆಹಲಿಯ ತಬ್ಲೀಗ್ ಜಮಾತ್ ಧರ್ಮಸಭೆಗೆ ಹೋಗಿ ಬಂದ 284ಜನರು ಇದ್ದು ಈವರೆಗೆ ಅವರ ಪತ್ತೆಯಾಗಿಲ್ಲ, ಅವರ ಫೋನ್ಗಳು ಸ್ವೀಚ್ ಆಫ್ ಆಗಿದೆ. ಈಗಾಗಲೇ ಗಲ್ಫ್ ರಾಷ್ಟ್ರಗಳಿಂದ ಹಿಂದೆ ಬರಲು 3.5 ಲಕ್ಷ ಜನ ನೋಂದಣಿ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ.
ನಿಮ್ಮೊಂದಿಗೆ ಉತ್ತಮ ಸಾಮಾಜಿಕ ವ್ಯವಸ್ಥೆ, ಕೇರಳದ ಬಿಜೆಪಿಯ ಕಾರ್ಯಕರ್ತರ ಜಾಲ, ಎನ್ಜಿಒಗಳ ದೊಡ್ಡ ನೆಟ್ವರ್ಕ್, ಮಾಧ್ಯಮವಿದೆ. ಪರಿಹಾರದ ವಿಷಯದಲ್ಲಿ ರಾಜಕೀಯ ಮಾಡುವುದು ಬಿಟ್ಟು ಕೆಲಸ ಮಾಡಿ, ಕೇರಳ ಅರ್ಹವಾಗಿದೆ ಎಂದು ಹೇಳಿದ್ದಾರೆ.