ನವದೆಹಲಿ, ಏ 30 (Daijiworld News/MSP): ಕೊರೊನಾ ವೈರಸ್ ಹಾವಳಿಯಿಂದಾಗಿ ಯುಎಇಯಲ್ಲಿ ಸಿಲುಕಿ ತೊಂದರೆ ಅನುಭವಿಸಿ ಮರಳಿ ಸ್ವದೇಶಕ್ಕೆ ಮರಳಲು ಬಯಸುವ ಭಾರತೀಯರಿಗೆ, ಭಾರತದ ರಾಯಭಾರಿ ಕಚೇರಿ ಆನ್ ಲೈನ್ ನೋಂದಣಿ ಪ್ರಾರಂಭಿಸಿದೆ.
www.indianembassyuae.gov.in or Consulate www.cgidubai.gov.in ನಲ್ಲಿ ಭಾರತಕ್ಕೆ ಮರಳಲು ಬಯಸುವವರು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ. ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಸ್ವದೇಶಕ್ಕೆ ಮರಳಲು ಬಯಸುತ್ತಿರುವ ಭಾರತೀಯರು ಒಂದೇ ಕುಟುಂಬದವರಾಗಿದ್ದರೂ ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಬೇಕಿದೆ.
ಮೇ.03 ವರೆಗೆ ಲಾಕ್ ಡೌನ್ ಘೋಷಣೆ ಮಾಡಿರುವ ಭಾರತ ಸರ್ಕಾರ ದೇಶದ ಒಳಗೆ ಹಾಗೂ ವಿದೇಶಗಳ ಸಂಚಾರಕ್ಕೆ ನಿರ್ಬಂಧ ವಿಧಿಸಿದೆ. ಆದರೆ ಆ ಬಳಿಕ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರಲು ಕೇಂದ್ರ ಸರಕಾರ ಚಿಂತನೆ ನಡೆಸಿದ್ದು, ವಿಮಾನಗಳನ್ನು , ಯುದ್ದನೌಕೆಗಳನ್ನು ಸನ್ನದ್ದ ಸಿತಿಯಲ್ಲಿಡುವಂತೆ ಕೇಂದ್ರ ಸರ್ಕಾರ ಏರ್ ಇಂಡಿಯಾ ಹಾಗೂ ನೌಕಾಪಡೆಗೆ ಸೂಚನೆ ನೀಡಿದೆ.