ಚೆನ್ನೈ, ಮೇ 1 (Daijiworld News/MSP): ಕೊರೊನಾ ವೈರಸ್ ಪ್ರಪಂಚದಾದ್ಯಂತ ಹರಡುತ್ತಿದ್ದಂತೆ ಮತ್ತು ವೈರಸ್ ನ ಅನೇಕ ರೂಪಾಂತರಗಳು ಬೆಳಕಿಗೆ ಬರುತ್ತಿದ್ದಂತೆಯೇ ಸರ್ಕಾರಗಳು ಕೂಡಾ ಜಾಗತಿಕವಾಗಿ ಸವಾಲುಗಳಿಗೆ ಸ್ಪಂದಿಸುತ್ತಿವೆ. ಈ ನಡುವೆ ಚೆನ್ನೈ ಕಾರ್ಪೊರೇಷನ್ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸಲು ಹೊಸ ಆದೇಶಗಳನ್ನು ಬಿಡುಗಡೆ ಮಾಡಿದೆ.
ಕರೋನವೈರಸ್ ವಿರುದ್ಧ ಹೋರಾಡಲು ಎಟಿಎಂಗಳನ್ನು ಪ್ರತಿಯೊಂದು ಬಳಕೆಯ ನಂತರವೂ ಸೋಂಕು ರಹಿತಗೊಳಿಸಬೇಕಾಗುತ್ತದೆ. ಅಂದರೆ ಪ್ರತಿ ಬಳಕೆದಾರ ಬಳಸಿದ ನಂತರ ಎಟಿಎಂ ಮಷಿನ್ ಪ್ರತಿ ಬಾರಿ ಸ್ವಚ್ಚಗೊಳಿಸಲಾಬೇಕಾಗುತ್ತದೆ. ಎಟಿಎಂ ಸ್ಯಾನಿಟೈಸ್ ಮಾಡದೆ ಈ ನಿಯಮವನ್ನು ಉಲ್ಲಂಘಿಸುವ ಯಾವುದೇ ಬ್ಯಾಂಕ್ ನ ಯಾವುದೇ ಎಟಿಎಂ ನ್ನು ತಕ್ಷಣ ಸೀಲ್ ಡೌನ್ ಮಾಡಿ ಬಳಕೆಗೆ ನಿಷೇಧ ಹೇರಲಾಗುತ್ತದೆ.
ಮಾತ್ರವಲ್ಲದೆ ಲಾಕ್ಡೌನ್ ಸಮಯದಲ್ಲಿ ಅಗತ್ಯ ಸೇವೆಗಳ ವಿಭಾಗದಲ್ಲಿ ಕಚೇರಿ ತೆರೆಯಲು ಅನುಮತಿ ಪಡೆದ ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಸಂಸ್ಥೆಗಳು, ತಮ್ಮ ಕಚೇರಿಯನ್ನು ದಿನಕ್ಕೆ ಎರಡು ಬಾರಿಯಂತೆ ಸ್ಯಾನಿಟೈಸ್ ಮಾಡಬೇಕಾಗುತ್ತದೆ. ಇದಲ್ಲದೆ ಆದರೆ ಸಾಮಾಜಿಕ ಅಂತರದ ಮಾನದಂಡಗಳನ್ನು ಕಡ್ಡಾಯ ಅನುಸರಿಸಲೇಬೇಕು. ಇಷ್ಟು ಮಾತ್ರವಲ್ಲದೇ ಸಿಬ್ಬಂದಿ ಆಗಾಗ್ಗೆ ಕೈ ತೊಳೆಯುವುದು ಇರಬೇಕು, ಮತ್ತು ಆವರಣವನ್ನು ಸೋಂಕುನಿವಾರಕಗೊಳಿಸಲು ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ.