ಬೆಂಗಳೂರು, ಮೇ.01 (DaijiworldNews/PY) : ಗರ್ಭಿಣಿಯೆಂದು ಲೆಕ್ಕಿಸದೇ ಕೊರೊನಾ ಸೋಂಕಿತರ ಸೇವೆಯಲ್ಲಿ ತೊಡಗಿದ್ದ ವೈದ್ಯೆಯನ್ನು ಪತಿ ತಡರಾತ್ರಿ ಮನೆಯಿಂದ ಹೊರಹಾಕಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.
ಕೊರೊನಾದಿಂದ ಲಾಕ್ಡೌನ್ ಆದ ಕಾರಣ ವೈದ್ಯೆಯ ಪತಿ ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಟೆಕ್ಕಿಯ ಪತ್ನಿ ವೈದ್ಯೆಯಾದ್ದರಿಂದ ಗರ್ಭಿಣಿಯಾಗಿದ್ದರೂ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ವೈದ್ಯೆಯ ಪತಿ ಕೋಪಗೊಂಡು ಸದಾ ಆಸ್ಪತ್ರೆಯಲ್ಲೇ ಇರುತ್ತೀಯ. ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ಮನೆ ಕೂಡಾ ಕ್ಲೀನ್ ಮಾಡುವುದಿಲ್ಲ ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಟೆಕ್ಕಿ ತನ್ನ ಪತ್ನಿಗೆ ಇದೇ ರೀತಿಯಾಗಿ ಕೆಲವು ದಿನಗಳಿಂದ ಕಿರುಕುಳು ಕೊಟ್ಟಿದ್ದಾನೆ. ಗುರುವಾರದಂದು ತಡ ರಾತ್ರಿ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದಾನೆ. ಇದನ್ನು ಸಹಿಸಿಕೊಳ್ಳದ ಆಕೆ ವನಿತ ಸಹಾಯವಾಣಿಗೆ ಫೋನ್ ಮಾಡಿ ದೂರು ನೀಡಿದ್ದಾರೆ.
ಕೂಡಲೇ ಗರ್ಭಿಣಿ ವೈದ್ಯೆಯ ನೆರವಿಗೆ ಬಂದ ವನತಾ ಸಹಾಯವಾಣಿ ಹಾಗೂ ಪೊಲೀಸರು ವೈದ್ಯೆಯ ಪತಿಯ ವಿರುದ್ದ ಎನ್ಸಿಆರ್ (ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲಿಸಿದ್ದು, ಆತನಿಗೆ ಪೊಲೀಸರು ಬುದ್ದಿವಾದ ಹೇಳಿ ಕಳುಹಿಸಿದ್ದು, ಎಫ್ಐಆರ್ ದಾಖಲಿಸಿಲು ವೈದ್ಯೆ ನಿರಾಕರಿಸಿದ್ದಾಳೆ.