ಕೋಲಾರ, ಮೇ 1 (Daijiworld News/MSP): ಪ್ರಾರ್ಥನಾ ಮಂದಿರಗಳಿರಬಹುದು, ದೇವಸ್ಥಾನ ,ಚರ್ಚ್, ಮಸೀದಿಗಳಿರಬಹುದು ಭಕ್ತಾದಿಗಳು ಪ್ರಾರ್ಥನೆ ಮಾಡಲೆಂದು , ಅಥವಾ ಇತರ ಕಾರಣಕ್ಕಾಗಿ ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಸಮಯದಲ್ಲಿ ಸಾಮೂಹಿಕವಾಗಿ ಜೊತೆ ಸೇರಬಾರದು ಎಂಬ ನಿಯಮವಿದೆ. ಆದರೂ ಕೆಲವು ಕಡೆಗಳಲ್ಲಿ ನಿಯಮ ಉಲ್ಲಂಘಿಸಲಾಗುತ್ತಿದ್ದೂ ಆಂತಹವ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಈ ನಡುವೆ ಕೋಲಾರ ನಗರದ ಮುನಿಸಿಪಾಲ್ ಆಸ್ಪತ್ರೆ ಮುಂಭಾಗದ ಮಸೀದಿಯಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದ ಮಾಹಿತಿ ಪಡೆದ ಸ್ಥಳೀಯ ಕೋಲಾರ ತಹಶೀಲ್ದಾರ್ ಶೋಭಿತ ಪರಿಶೀಲಿಸಲು ಮಸೀದಿಗೆ ಪ್ರವೇಶ ಮಾಡಿ ನಮಾಜ್ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ.
"ನಿಮಗೆ ಲಾಕ್ಡೌನ್ ಸಮಯದಲ್ಲಿ ಮಸೀದಿಯಲ್ಲಿ ಒಟ್ಟಾಗಿ ಸೇರಿ ನಮಾಜ್ ಮಾಡಲು ಯಾರು ಹೇಳಿದ್ದು, ಈ ರೀತಿ ಸಾಮೂಹಿಕವಾಗಿ ಸೇರಬಾರದು ಎಂದು ನಿಮಗೆ ಅರಿವಿಲ್ವಾ ? ಇವರೆಲ್ಲರನ್ನೂ ಇಲ್ಲಿಯೇ ಕೂಡಿಹಾಕಿ. ಯಾರನ್ನೂ ಹೊರಗೆ ಬಿಡಬೇಡಿ " ಎಂದಿದ್ದಾರೆ. ಇದೀಗ ಮಸೀದಿಗೆ ನುಗ್ಗಿದ ಮಹಿಳಾ ತಹಶೀಲ್ದಾರ್ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗುತ್ತಿದ್ದು, ಮಸೀದಿಯೊಳಗೆ ಕಾಲಿರಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.