ಬೆಂಗಳೂರು, ಮೇ.01 (DaijiworldNews/PY) : ಕೊರೊನಾ ನಿಯಂತ್ರಣ ಮಾಡುವ ಸಲುವಾಗಿ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲು ಸರ್ಕಾರ ಮುಂದಾಗಿದ್ದು, ಅಗತ್ಯವಿರುವ ಲ್ಯಾಬ್ಗಳನ್ನು ಹೆಚ್ಚಿಸಲು ಕ್ರಮ ತೆಗೆದುಕೊಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ 60 ಕೊರೊನಾ ಲ್ಯಾಬ್ಗಳನ್ನು ಮೇ ತಿಂಗಳ ಅಂತ್ಯಕ್ಕೆ ಸ್ಥಾಪನೆ ಮಾಡಲು ಸರ್ಕಾರ ಗುರಿ ಹೊಂದಿದೆ ಎಂದರು.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ರಾಜ್ಯದಲ್ಲಿ ಕೊರೊನಾ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಗದಗ, ವಿಜಯಪುರ, ತುಮಕೂರು ಜಿಲ್ಲೆಗಳಲ್ಲೂ ಈಗ ಕೊರೊನಾ ಲ್ಯಾಬ್ ಕಾರ್ಯಾರಂಭ ಮಾಡಿವೆ. ಫೆಬ್ರವರಿಯಲ್ಲಿದ್ದ 2 ಲ್ಯಾಬ್ನಿಂದ ಈಗ ನಾವು 26 ಲ್ಯಾಬ್ಗಳನ್ನು, ದಿನಕ್ಕೆ 5000 ಪರೀಕ್ಷೆ ಸಾಮರ್ಥ್ಯ ಪಡೆದಿದ್ದೇವೆ. ಮೇ ಅಂತ್ಯಕ್ಕೆ 60 ಲ್ಯಾಬ್ ಹೊಂದುವುದು ನಮ್ಮ ಗುರಿ ಎಂದು ತಿಳಿಸಿದ್ದಾರೆ.