ನವದೆಹಲಿ, ಮೇ 1 (Daijiworld News/MSP): ಲಾಕ್ಡೌನ್ ಮುಕ್ತಾಯದ ಹಂತದಲ್ಲಿ ಮುಂದೇನು? ಎಂಬ ವಿಚಾರಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರನ್ನು ಭೇಟಿಯಾಗಿ ಸಭೆ ನಡೆಸಿದರು.
ಲಾಕ್ ಡೌನ್ ವಿಸ್ತರಿಸಬೇಕೆ?, ಮುಂದುವರಿಸಬೇಕೆ? ವಿಮಾನ , ರೈಲು ಸಂಚಾರ ಆರಂಭಿಸಬೇಕೆ? ಮುಂದೆ ಉಂಟಾಗಬಹುದಾದ ಸಮಸ್ಯೆ ಏನು? ಮುಂಜಾಗ್ರತಾ ಕ್ರಮ ಹೇಗಿರಬೇಕು? ಎಂಬಿತ್ಯಾದಿಗಳ ಕುರಿತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಮತ್ತು ವಿಮಾನಯಾನ ಸಚಿವ ಹರ್ದೀಪ್ ಪುರಿ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಸಭೆ ನಡೆಸಿದರು.
ಇದರೊಂದಿಗೆ ದೇಶದ ಆರ್ಥಿಕತೆ ಅಭಿವೃದ್ದಿಯ ಕಾರ್ಯತಂತ್ರಗಳನ್ನು ಚರ್ಚಿಸಲಾಯಿತು. ಸ್ಥಳೀಯ ಹಾಗೂ ವಿದೇಶಿ ಹೂಡಿಕೆಗಳ ಕಾರ್ಯತಂತ್ರ ಬಗೆಯೂ ಯೋಜನೆ ರೂಪಿಸಿಲು ಸಭೆಯಲ್ಲಿ ತಿಳಿಸಲಾಯಿತು. ಜೊತೆಗೆ ವಿಮಾನಗಳ ಹಾರಾಟದ ಕಾರ್ಯಾರಂಭ ಹೇಗೆ ಮಾಡಬೇಕು, ಸಾಮಾಜಿಕ ನಿಯಮಗಳ ಪಾಲನೆ , ವಲಸೆ ಕಾರ್ಮಿಕರ ಬಗ್ಗೆಯೂ ಚರ್ಚಿಸಲಾಯಿತು ಎಂದು ಪ್ರಧಾನ ಮಂತ್ರಿಗಳ ಕಚೇರಿ ತಿಳಿಸಿದೆ.