ನವದೆಹಲಿ, ಮೇ 01 (DaijiworldNews/SM): ಮತ್ತೆ ಲಾಕ್ಡೌನ್ ಅವಧಿ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ನೀಡಿದೆ. ಮೇ 3ರ ತನಕ ಇದ್ದ ಅವಧಿ ಮತ್ತೆ ವಿಸ್ತರಣೆಯಾಗಿದೆ.
ಕೇಂದ್ರ ಗೃಹ, ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯಿಂದ ಈ ಬಗ್ಗೆ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ. ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯ ಕಾರ್ಯದರ್ಶಿಗಳ ವರದಿ ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ನಿಯಮಾವಳಿ ಸಡಿಲಿಕೆ ಆಯಾಯ ಝೋನ್ಗಳನ್ನು ಆಧರಿಸಿ ಮಾಡಲಾಗುವುದು. ಗ್ರೀನ್ ಮತ್ತು ಆರೇಂಜ್ ಝೋನ್ಗೆ ಸ್ವಲ್ಪ ನಿಯಮಾವಳಿ ಸಡಿಲಿಕೆ ಇರಲಿದೆ.
ರೆಡ್ ಝೋನ್ನಲ್ಲಿ ಸಂಪೂರ್ಣ ಲಾಕ್ಡೌನ್ ನಿಯಮಾವಳಿ ಜಾರಿಯಲ್ಲಿ ಇರಲಿದೆ. ಸತತವಾಗಿ ೨೧ ದಿನಗಳು ಕೊರೊನಾ ಕೇಸ್ ಬಾರದೇ ಇದ್ದಲ್ಲಿ ಅಂತಹ ಪ್ರದೇಶಗಳನ್ನು ಗ್ರೀನ್ ಝೋನ್ ಎಂದು ಘೋಷಣೆ ಮಾಡಲಾಗುತ್ತದೆ. ಪ್ರಸ್ತುತ ಇರುವ ಕೊರೊನಾ ಪಾಸಿಟಿವ್ ಕೇಸ್ ಮತ್ತು ಬೆಳವಣಿಗೆ ಮೇಲೆ ರೆಡ್ಝೋನ್ ನಿರ್ಧಾರವನ್ನು ಮಾಡಲಾಗುತ್ತದೆ.