ಬೆಂಗಳೂರು, ಮೇ 01 (DaijiworldNews/SM): ಕಳೆದ ಕೆಲವು ದಿನಗಳಿಂದ ಚರ್ಚೆಗೆ ಕಾರಣವಾಗಿದ್ದ ಮದ್ಯ ಮಾರಾಟ ವಿಚಾರ ಇದೀಗ ಅಂತಿಮ ತೀರ್ಮಾನಕ್ಕೆ ಬಂದಿದೆ.
ಸಂಬಂಧಿಸಿದಂತೆ ನಡೆಯುತ್ತಿದ್ದ ಚರ್ಚೆಗೆ ಇದೀಗ ಉತ್ತರ ಸಿಕ್ಕಿದ್ದು, ಮೇ 4ರ ಬಳಿಕ ಮದ್ಯಮಾರಾಟಕ್ಕೆ ಕೇಂದ್ರ ಸರಕಾರ ಅವಕಾಶ ನೀಡಿದೆ. ಆ ಮೂಲಕ ಮದ್ಯ ಪ್ರೀಯರಿಗೆ ಖುಷಿಯ ಸುದ್ದಿಯನ್ನು ನೀಡಿದೆ. ಗ್ರೀನ್ ಝೋನ್ ಗಳಲ್ಲಿ ಮದ್ಯ ಮಾರಾಟಕ್ಕೆ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.
ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವೀಡಿಯೋ ಕಾನ್ಪರೆನ್ಸ್ ಮೂಲಕ ಚರ್ಚೆ ನಡೆಸಿದ್ದ ಸಂದರ್ಭದಲ್ಲಿ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ದೇಶದ ಆದಾಯ ಮೂಲಗಳಲ್ಲಿ ಮದ್ಯವೂ ಒಂದಾಗಿದೆ. ಈ ಕಾರಣಕ್ಕಾಗಿ ಮದ್ಯಮಾರಾಟಕ್ಕೆ ಮುಖ್ಯಮಂತ್ರಿಗಳು ಮನವಿ ಮಾಡಿಕೊಂಡಿದ್ದರು.
ರಾಜ್ಯಗಳ ಮುಖ್ಯಮಂತ್ರಿಗಳ ಮನವಿಗೆ ಸ್ಪಂಧಿಸಿರುವ ಪ್ರಧಾನಿ ನರೇಂದ್ರ ಮೋದಿ ಮದ್ಯಮಾರಾಟಕ್ಕೆ ಅವಕಾಶ ಕಲ್ಪಿಸಿದ್ದಾರೆ. ಆ ಮೂಲಕ ಕಳೆದ 40 ದಿನಗಳಿಂದ ಬಂದ್ ಆಗಿದ್ದ ಮದ್ಯದ ಅಂಗಡಿಗಳು ಬಾಗಿಲು ತೆರೆಯಲಿವೆ. ಹಾಗೂ ಮದ್ಯ ಪ್ರೀಯರ ಬೇಡಿಕೆಯೂ ಕೂಡ ಈಡೇರಲಿದೆ.
ಎಲ್ಲಿ ಮದ್ಯ ಸಿಗುತ್ತೆ? ಮದ್ಯ ಮಾರಾಟಕ್ಕೆ ಇರುವ ನಿಯಮಾವಳಿಗಳೇನು?
ರಾಜ್ಯದ್ಯಂತ ಮದ್ಯಮಾರಾಟಕ್ಕೆ ಅವಕಾಶ
ಗ್ರೀನ್ ಝೋನ್ ನಲ್ಲಿ ಮಾತ್ರವೇ ಮದ್ಯಮಾರಾಟ
ಮದ್ಯದಂಗಡಿ ಮುಂದೆ ಐದಕ್ಕಿಂತ ಹೆಚ್ಚಿನ ಜನ ಸೇರಬಾರದು
ಗ್ರೀನ್ ಝೋನ್ ಗಳಲ್ಲಿ ಬಾರ್, ಪಾನ್ ಶಾಪ್ ಓಪನ್ ಮಾಡಲು ಗ್ರೀನ್ ಸಿಗ್ನಲ್
ಮದ್ಯದಂಗಡಿಯಲ್ಲೇ ಕುಡಿಯಲು ಅವಕಾಶವಿಲ್ಲ
ಸಾರ್ವಜನಿಕ ಸ್ಥಳಗಳಲ್ಲೂ ಕುಡಿಯಲು ಅವಕಾಶವಿಲ್ಲ
ಪಾರ್ಸೆಲ್ ಕೊಂಡೊಯ್ಯಲು ಮಾತ್ರ ಅವಕಾಶ
ಮದ್ಯ ಖರೀದಿ ಸಂದರ್ಭ ಸಾಮಾಜಿಕ ಅಂತರ ಕಡ್ಡಾಯ
6 ಅಡಿ ಅಂತರ ಕಾಯ್ದುಕೊಳ್ಳಬೇಕು