ಕೋಲ್ಕತಾ, ಮೇ 02 (Daijiworld News/MB) : ಪಶ್ಚಿಮ ಬಂಗಾಳದ 10 ಜಿಲ್ಲೆಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ರೆಡ್ ಝೋನ್ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಇದನ್ನು ಆಕ್ಷೇಪ ಮಾಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈ ಮೌಲ್ಯಮಾಪನ ತಪ್ಪಾಗಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ಕೇಂದ್ರ ಆರೋಗ್ಯ ಇಲಾಖೆಗೆ ಪತ್ರ ಬರೆದಿರುವ ಪಶ್ಚಿಮ ಬಂಗಾಳ ಆರೋಗ್ಯ ಇಲಾಖೆ, ಕೇಂದ್ರದ ಮಾರ್ಗಸೂಚಿಯ ಪ್ರಕಾರ ರಾಜ್ಯದ ನಾಲ್ಕು ಜಿಲ್ಲೆಗಳನ್ನು ಮಾತ್ರ ರೆಡ್ ಝೋನ್ಗೆ ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿದ್ದು ಪತ್ರದೊಂದಿಗೆ ರಾಜ್ಯದ ರೆಡ್ ಝೋನ್, ಆರೆಂಜ್ ಝೋನ್ ಮತ್ತು ಗ್ರೀನ್ ಝೋನ್ ಜಿಲ್ಲೆಗಳ ಪಟ್ಟಿಯನ್ನು ಲಗತ್ತಿಸಿದೆ.
ಲಾಕ್ಡೌನ್ನ್ನು ಮೇ 17ರ ವರೆಗೆ ವಿಸ್ತರಣೆ ಮಾಡಿರುವ ಕೇಂದ್ರ ಸರ್ಕಾರ ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ದೃಢಪಟ್ಟಿರುವ ಪ್ರದೇಶಗಳನ್ನು ರೆಡ್, ಆರೆಂಜ್ ಮತ್ತು ಗ್ರೀನ್ ಝೋನ್ ಎಂದು ವಿಂಗಡನೆ ಮಾಡಿದೆ. ಹಾಗೆಯೇ ಆರೆಂಜ್ ಹಾಗೂ ಗ್ರೀನ್ ಝೋನ್ಗಳಿಗೆ ಕೆಲವು ವಿನಾಯತಿ ನೀಡಲಾಗಿದೆ.