ಬೆಂಗಳೂರು, ಮೇ 02 (Daijiworld News/MB) : ರಾಜ್ಯದಲ್ಲಿ ಮದ್ಯ ಮಾರಾಟ ಮಾಡುವ ವಿಷಯ ಮುಖ್ಯಮಂತ್ರಿ ಕೈಯಲ್ಲಿದೆ. ಅವರ ತೀಮಾರ್ನವೇ ಅಂತಿಮ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದರು.
ಶನಿವಾರ ಮುಖ್ಯಮಂತ್ರಿ ಜೊತೆ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೇ 3 ರ ಬಳಿಕ ಎಲ್ಲಿ ಮದ್ಯ ಮಾರಾಟ ಮಾಡಬಹುದು ಎಂದು ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ ಎಂದರು.
ಹಾಗೆಯೇ ಒಂದು ಕೋಟಿ ಜನಸಂಖ್ಯೆ ಇರುವ ಬೆಂಗಳೂರು ನಗರವನ್ನು ಒಂದು ಘಟಕವಾಗಿ ನೋಡದೆ ನಾಲ್ಕು ವಲಯವಾಗಿ ವಿಂಗಡನೆ ಮಾಡಬೇಕು. ಕೊರೊನಾ ಸೋಂಕು ಹೆಚ್ಚು ಇಲ್ಲದ ವಲಯದಲ್ಲಿ ಚಟುವಟಿಕೆ ಆರಂಭಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ತಿಳಿಸಲಾಗಿದೆ ಎಂದು ಹೇಳಿದರು.