ನವದೆಹಲಿ, ಮೇ 2 (Daijiworld News/MSP): ಕೊರೊನಾ ಪ್ರಸರಣದ ಕೆಟ್ಟ ಹಂತವನ್ನು ಭಾರತ ದಾಟಿದೆ, ಆದರೂ ನಿರ್ಲಕ್ಷ್ಯ ವಹಿಸುವಂತಿಲ್ಲ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಟುವಟಿಕೆ ನಿಧಾನಗತಿಯಲ್ಲಿ ಮುಂದುವರಿಸಬೇಕು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಭಾರತ ಇನ್ನು ಕೂಡಾ ಸಾಂಕ್ರಮಿಕ ರೋಗ ಕೊರೊನಾದಿಂದ ಸಂಪೂರ್ಣವಾಗಿ ಮುಕ್ತವಾಗಿಲ್ಲ, ಆದರೆ ಕೊರೊನಾದ ಕೆಟ್ಟ ಹಂತ ದಾಟಿದ್ದೇವೆ. ಲಾಕ್ ಡೌನ್ ವಿಧಿಸಿದ ಬೇರೆ ದೇಶಗಳಿಗೆ ಹೋಲಿಸಿದ್ರೆ ಭಾರತದ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ನಾವೀಗ ಮೂರನೇ ಹಂತದ ಲಾಕ್ ಡೌನ್ ನಲ್ಲಿದ್ದೇವೆ, ಕೊರೊನಾ ಹರಡುವ ತೀವ್ರತೆ ಲಾಕ್ ಡೌನ್ ನಿಂದಾಗಿ ಕಡಿಮೆಯಾಗುತ್ತದೆ, ಹೀಗಾಗಿ ಮತ್ತೆ 2 ವಾರಗಳ ಲಾಕ್ ಡೌನ್ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ.
ಕೋವಿಡ್ ನಿಂದಾಗಿ ಎಲ್ಲರ ಬದುಕು ವಿಭಿನ್ನವಾಗಿ ಬದುಕಬೇಕಿದೆ. ಮುಖಕ್ಕೆ ಮಾಸ್ಕ್ ಧರಿಸುವುದು, ಪದೇ ಪದೆ ಕೈ ತೊಳೆಯುವುದು, ಸಾಮಾಜಿಕ ಅಂತರ ಪಾಲಿಸಬೇಕಿದೆ ಎಂದು ಅವರು ಹೇಳಿದರು.