ಬೆಂಗಳೂರು, ಮೇ 2 (Daijiworld News/MSP): ಹಸಿರುವಲಯದಲ್ಲಿ ಮಾತ್ರ ಮದ್ಯ ಮಾರಾಟ ಅವಕಾಶ ನೀಡಿದ್ದ ಕೇಂದ್ರ ಸರ್ಕಾರ ಇದೀಗ ಅಂತಿಮ ತೀರ್ಮಾನಕ್ಕೆ ಬಂದಿದೆ. ಗ್ರೀನ್, ರೆಡ್ ಝೋನ್ ಮಾತ್ರವಲ್ಲದೇ ಷರತ್ತು ವಿಧಿಸಿ ರೆಡ್ ಝೋನ್ ನಲ್ಲೂ ಮದ್ಯ ಮಾರಾಟಕ್ಕೆ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.
ಮದ್ಯವ್ಯಸನಿಗಳು ಎಣ್ಣೆ ಸಿಗುತ್ತಿಲ್ಲ ಎಂದು ಆತ್ಮಹತ್ಯೆಗೆ ಶರಣಾಗುತ್ತಿದ್ದರೆ ಅತ್ತ ರಾಜ್ಯ ಸರ್ಕಾರಗಳು ಮದ್ಯ ಮಾರಾಟಕ್ಕೆ ಅವಕಾಶ ನೀಡಿ ಎಂದು ಕೇಂದ್ರದ ಮೇಲೆ ಒತ್ತಡ ಹೇರಿದ್ದವು. ಮದ್ಯ ಮಾರಾಟವೂ ರಾಜ್ಯಗಳ ಪ್ರಮುಖ ಆದಾಯವಾಗಿರುವುದರಿಂದ ಕೇಂದ್ರ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡಬೇಕೆಂದು ಹಲವು ರಾಜ್ಯಗಳು ಒತ್ತಾಯಿಸಿದ್ದವು.
ಇದಾದ ಬಳಿಕ ಕೇಂದ್ರ ಸರ್ಕಾರವೂ ಶುಕ್ರವಾರವಷ್ಟೇ ಹಸಿರು ವಲಯದಲ್ಲಿ ಮಾತ್ರ ಎಣ್ಣೆ ಮಾರಾಟಕ್ಕೆ ಅವಕಾಶ ನೀಡಿತ್ತು. ಆದರೀಗ, ಮತ್ತೆ ಸ್ಪಷ್ಟೀಕರಣ ನೀಡಿರುವ ಕೇಂದ್ರ ಗೃಹ ಇಲಾಖೆ ಆರೇಂಜ್ ಜೋನ್ಗಳಲ್ಲೂ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಇನ್ನು, ರೆಡ್ ಜೋನ್ಗಳಲ್ಲಿ ಮಾತ್ರ ಕೆಲವು ಷರತ್ತುಗಳೊಂದಿಗೆ ಮದ್ಯ ಮಾರಾಟ ಮಾಡಬಹುದು ಎಂದು ಹೇಳಿದೆ. ರೆಡ್ ಝೋನ್ ನಲ್ಲಿ ಆರು ಅಡಿ ಅಂತರ ಕಾಯ್ದುಕೊಳ್ಳುವುದು ಬಹುಮುಖ್ಯವಾಗಿದೆ
ಇನ್ನು, ಕೊರೊನಾ ಪೀಡಿದ ಕೆಂಪು ವಲಯದಲ್ಲಿ ಅಗತ್ಯವಾಗಿರುವ ಇ-ಕಾಮರ್ಸ್ ಚಟುವಟಿಕೆ ಮಾಡಬಹುದು. ಗ್ರೀನ್ ಮತ್ತು ಆರೇಂಜ್ ಜೋನ್ನಲ್ಲೂ ಎಲ್ಲಾ ಇ-ಕಾಮರ್ಸ್ ಚಟುವಟಿಕೆ ಮಾಡಬಹುದು. ಸೆಲೂನ್ ಅಂಗಡಿಗಳೂ ತೆರೆಯಬಹುದು ಎಂದಿದೆ. ಆದರೆ ಮೆಟ್ರೋ ರೈಲು ಬಸ್ಸು ಸಹಿತ ಯಾವುದೇ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ನೀಡಿಲ್ಲ