ಜೈಪುರ, ಮೇ 02 (Daijiworld News/MB) : ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದ್ದು ಇದರಿಂದಾಗಿ ಹಲವು ಸಣ್ಣ ಪುಟ್ಟ ವ್ಯಾಪಾರ ಮಾತ್ರವಲ್ಲದೇ ಉದ್ಯಮಗಳಿಗೆ ತೊಂದರೆ ಉಂಟಾಗಿದೆ. ಇದರಿಂದಾಗಿ ರಾಜಸ್ಥಾನದ ಚಿನ್ನದ ಅಂಗಡಿ ಮಾಲೀಕ ಈಗ ತರಕಾರಿ ಮಾರಾಟ ಮಾಡುವಂತಾಗಿದೆ.
25 ವರ್ಷಗಳಿಂದ ರಾಜಸ್ಥಾನದಲ್ಲಿ ಚಿನ್ನದ ಆಭರಣ ವ್ಯಾಪಾರ ಮಾಡಿಕೊಂಡಿದ್ದ ಹುಕುಮಚಂದ್ ಸೋನಿ ಎಂಬವರು ಲಾಕ್ಡೌನ್ ಪರಿಣಾಮದಿಂದಾಗಿ ತರಕಾರಿ ವ್ಯಾಪಾರವನ್ನು ತನ್ನ ಚಿನ್ನದ ಅಂಗಡಿಯ್ಲಲೇ ಆರಂಭ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಹುಕುಮಚಂದ್ ಸೋನಿ ಅವರು, ನಾನು ಎಂದಿಗೂ ತರಕಾರಿ ವ್ಯಾಪಾರ ಮಾಡಬೇಕಾಗುತ್ತದೆ ಎಂದು ಅಂದು ಕೊಂಡಿರಲಿಲ್ಲ. ನಾಲ್ಕು ದಿನದಿಂದ ತರಕಾರಿ ಮಾರಾಟ ಮಾಡುತ್ತಿದ್ದೇನೆ. ಈಗ ನಾನು ಬದುಕಬೇಕಾದರೆ ಇದೇ ನನಗೆ ಹಾದಿಯಾಗಿದೆ ಎಂದು ಹೇಳಿದ್ದಾರೆ.
ನಾನು ಆಭರಣ ಅಂಗಡಿ ನಡೆಸುತ್ತಿದೆ. ಉಂಗುರಗಳಂತಹ ಸಣ್ಣ ಆಭರಣ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೆ. ಹಾನಿಗೊಳಗಾದ ಆಭರಣಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೆ. ಅದು ದೊಡ್ಡದೇನಲ್ಲ ಆದರೆ ನನ್ನ ಕುಟುಂಬ ನಡೆಸಲು ಯಾವುದೇ ತೊಂದರೆಯಿರಲಿಲ್ಲ. ಆದರೆ ಈಗ ಕಷ್ಟವಾಗಿದೆ. ನನ್ನಲ್ಲಿ ದೊಡ್ಡ ಪ್ರಮಾಣದ ಉಳಿತಾಯವಿಲ್ಲ, ಬಂಡವಾಳವೂ ಇಲ್ಲ. ಆದ್ದರಿಂದ ಇದೊಂದೆ ನನಗೆ ತೋಚಿದ್ದು. ಚಿನ್ನದಂಗಡಿ ಇದ್ದ ನಮಗೆ ಯಾರು ಹಣ ಆಹಾ ನೀಡುತ್ತಾರೆ ಎನ್ನುತ್ತಾರೆ ಹುಕುಮ್ ಚಂದ್.
ಲಾಕ್ಡೌನ್ ಆರಂಭವಾದಾಗ ಎಲ್ಲಾ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದರೂ ಕೆಲವು ವಾರಗಳವರೆಗೆ ಹುಕುಮ್ ಚಂದ್ ಚಿನ್ನದ ಅಂಗಡಿ ತೆರದಿದ್ದರು. ಆದರೆ ಗ್ರಾಹಕರೇ ಇಲ್ಲದ ಕಾರಣ ದಿಕ್ಕು ತೋಚದೆ ಆ ಅಂಗಡಿಯನ್ನೇ ತರಕಾರಿ ಅಂಗಡಿಯನ್ನಾಗಿ ಮಾಡಿದೆ ಎಂದು ಹೇಳುತ್ತಾರೆ.