ನವದೆಹಲಿ, ಮೇ.02 (DaijiworldNews/PY) : ಕಾಂಕ್ರೀಟ್ ಮಿಕ್ಸರ್ ವಾಹನದೊಳಗೆ ಕುಳಿತು 18 ಕಾರ್ಮಿಕರು ಪ್ರಯಾಣಿಸುತ್ತಿರುವ ಘಟನೆ ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಕಾಂಕ್ರೀಟ್ ಮಿಕ್ಸರ್ ಟ್ಯಾಂಕ್ನಿಂದ ಒಬ್ಬೊಬ್ಬರೇ ಹೊರ ಬರುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಮಹಾರಾಷ್ಟ್ರದಿಂದ ಲಕ್ನೋಗೆ ಅವೆರಲ್ಲರೂ ಪ್ರಯಾಣಿಸುತ್ತಿದ್ದರು. ಟ್ರಕ್ ಅನ್ನು ಪೊಲೀಸ್ ಠಾಣೆ ಕಳುಹಿಸಲಾಗಿದ್ದು, ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾಕಾಂತ್ ಚೌಧರಿ ತಿಳಿಸಿದ್ದಾರೆ.
ಲಾಕ್ಡೌನ್ನಿಂದಾಗಿ ಇದ್ದ ಸ್ಥಳಗಳಲ್ಲಿಯೇ ಸಿಲುಕಿರುವ ಕಾರ್ಮಿಕರು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳು ತಮ್ಮ ಮನೆಗಳಿಗೆ ಮರಳಲು ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, ಎ. 29ರಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಅದಾಗಿಯೂ, ಕಂಟೈನ್ಮೆಂಟ್ ಅಲ್ಲದ ವಲಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ.
ಮೇ 4 ರಿಂದ ಹೊಸ ಮಾರ್ಗಸೂಚಿಗಳು ಜಾರಿಗೆ ಬರಲಿದ್ದು, ಇದರಿಂದಾಗಿ ಅನೇಕ ಜಿಲ್ಲೆಗಳಲ್ಲಿ ಲಾಕ್ಡೌನ್ನಿಂದ ಸಡಿಲಿಕೆ ಸಿಗುತ್ತಿದೆ. ನಗರಗಳಲ್ಲಿ ಕಠಿಣ ವೈದ್ಯಕೀಯ ತಪಾಸಣೆಗೆ ಒಳಪಟ್ಟ ಬಳಿಕವೇ ಸಿಲುಕಿದ್ದ ಎಲ್ಲ ಜನರು ಮನೆಗೆ ಹಿಂತಿರುಗಬಹುದು ಎಂದು ಮಾರ್ಗಸೂಚಿಗಳು ತಿಳಿಸಿವೆ.
ಮನೆಗೆ ಹೊಂತಿರುಗುವ ಮುನ್ನ, ಇತರ ಕಡೆಯಿಂದ ಬಂದ ಎಲ್ಲರಿಗೂ ಎಲ್ಲ ರಾಜ್ಯ ಸರ್ಕಾರಗಳು ಥರ್ಮಲ್ ಟೆಸ್ಟಿಂಗ್ ಕೇಂದ್ರಗಳು ಹಾಗೂ ಕ್ವಾರಂಟೈನ್ ಸೌಲಭ್ಯಗಳನ್ನು ಒದಗಿಸಲೇಬೇಕು. ಸಾರಿಗೆಗಾಗಿ ಸ್ವಚ್ಛಗೊಳಿಸಲಾದ ಬಸ್ಗಳ ವ್ಯವಸ್ಥೆಯನ್ನು ಕೂಡಾ ಮಾಡಬೇಕು ಎಂಬುದಾಗಿ ತಿಳಿಸಿದೆ.