ಲಕ್ನೋ, ಮೇ.03 (DaijiworldNews/PY) : ತಬ್ಲೀಗಿ ಜಮಾತ್ನ ಪಾತ್ರ ಖಂಡನೀಯ. ರೋಗ ಅಪರಾಧವಲ್ಲ, ಆದರೆ ಹರಡುವ ರೋಗವೊಂದನ್ನು ಮುಚ್ಚಿಟ್ಟಿದ್ದು ಅಪರಾಧ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಶನಿವಾರ ಸುದ್ದಿ ಮಾಧ್ಯಮದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರೋಗ ಅಪರಾಧವಲ್ಲ. ಆದರೆ, ಅದನ್ನು ಮುಚ್ಚಿಡುವುದು ಅಪರಾಧ. ತಬ್ಲೀಗಿ ಜಮಾತ್ಗೆ ಸಂಬಂಧಿಸಿದವರು ಈ ಅಪರಾಧವನ್ನು ಮಾಡಿದ್ದಾರೆ ಎಂದಿದ್ದಾರೆ.
ಉತ್ತರ ಪ್ರದೇಶ ಹಾಗೂ ದೇಶದ ಇತರ ಭಾಗಗಳಲ್ಲಿ ರೋಗ ಹರಡುವುದಕ್ಕೆ ತಬ್ಲೀಗಿ ಜಮಾತ್ನವರೇ ಕಾರಣ. ಅವರು ರೋಗವನ್ನು ಮುಚ್ಚಿಡದೇ ಇರುತ್ತಿದ್ದರೆ ಸೋಂಕು ಅಷ್ಟೊಂದು ವ್ಯಾಪಿಸುತ್ತಿರಲಿಲ್ಲ. ಅವರು ಮಾಡಿರುವ ಅಪರಾಧದ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಮಾರ್ಚ್ ನಲ್ಲಿ ತಬ್ಲೀಗಿ ಜಮಾತ್ ಸಭೆ ನಡೆದಿದ್ದು, ಆ ಸಭೆಯಲ್ಲಿ ಕೊರೊನಾ ಸೋಂಕಿರೂ ಪಾಲ್ಗೊಂಡಿದ್ದರು ಅಲ್ಲದೇ, ಸಭೆಯಲ್ಲಿ ಭಾಗವಹಿಸಿದ್ದ ಜನರು ಸೋಂಕಿತರೊಂದಿಗೆ ಓಡಾಡಿದ್ದು, ಅವರು ಊರಿಗೆ ವಾಪಾಸ್ಸಾದ ಸಂದರ್ಭ ಅವು ಮುಖಾಂತರ ಮತ್ತೊಬ್ಬರಿಗೂ ಸೋಂಕು ಹರಡಿತ್ತು.