ಬೆಂಗಳೂರು, ಮೇ 03 (Daijiworld News/MB) : ರಾಜ್ಯದಲ್ಲಿ ಮೇ 2 ರ ಸಂಜೆ 5 ಗಂಟೆಯಿಂದ ಮೇ 3 ರ ಮಧ್ಯಾಹ್ನ 12 ರವರೆಗೆ 5 ಹೊಸ ಕೊರೊನಾ ಪ್ರಕರಣಗಳು ದೃಢವಾಗಿದ್ದು ಸೋಂಕಿತರ ಸಂಖ್ಯೆ 606 ಕ್ಕೆ ಏರಿಕೆಯಾಗಿದೆ.
ಒಟ್ಟು ಐದು ಪ್ರಕರಣಗಳ ಪೈಕಿ ಮೂರು ಪ್ರಕರಣಗಳು ಕಲಬುರಗಿಯಲ್ಲೇ ವರದಿಯಾಗಿದ್ದು ಉಳಿದ ಎರಡು ಪ್ರಕರಣಗಳು ಬಾಗಲಕೋಟೆಯ ಮುಧೋಲ್ನಲ್ಲಿ ದೃಢಪಟ್ಟಿದೆ.
ಕಲಬುರಗಿಯಲ್ಲಿ 13 ವರ್ಷದ ಬಾಲಕಿ ಸೇರಿದಂತೆ 54 ವರ್ಷ ಹಾಗೂ 41 ವರ್ಷದವರಲ್ಲಿ ಸೋಂಕು ಪತ್ತೆಯಾಗಿದ್ದು ಬಾಗಲಕೋಟೆ ಮುಧೋಲ್ನಲ್ಲಿ 68 ವರ್ಷ ಹಾಗೂ 60 ವರ್ಷದ ವೃದ್ಧರಲ್ಲಿ ಸೋಂಕು ಪತ್ತೆಯಾಗಿದೆ. ಇವರೆಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಒಟ್ಟು 11 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಈವರೆಗೆ ಒಟ್ಟು 282 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 25 ಜನರು ಕೊರೊನಾಗೆ ಬಲಿಯಾಗಿದ್ದಾರೆ.