ಕೊಲ್ಕತ್ತಾ, ಮೇ 03 (DaijiworldNews/PY) : ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್ ಗಳಿಗೆ ಪಶ್ಚಿಮ ಬಂಗಾಳ ಸರ್ಕಾರ 10 ಲಕ್ಷ. ರೂ ಆರೋಗ್ಯ ವಿಮೆ ಘೋಷಿಸಿದೆ.
ಕೊರೊನಾ ವಾರಿಯರ್ಸ್ಗಳಂತೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೂ 10 ಲಕ್ಷವರೆಗೂ ಆರೋಗ್ಯ ವಿಮೆ ನೀಡಲು ನಮ್ಮ ಸರ್ಕಾರ ನಿರ್ಧರಿಸಿದೆ ಎಂದು ಭಾನುವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಅದರ ಕರ್ತವ್ಯವನ್ನು ನಿರ್ಭಯವಾಗಿ ಮಾಡಬೇಕು. ನಾವು ಸಮಾಜಕ್ಕೆ ಪತ್ರಕರ್ತರು ನೀಡಿರುವ ಕೊಡುಗೆಯನ್ನು ಗೌರವಿಸುತ್ತೇವೆ. ನಮ್ಮ ಸರ್ಕಾರವು ಪತ್ರಕರ್ತರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಹೊಂದಿದೆ. ಪತ್ರಿಕಾ ಸ್ವಾತಂತ್ರ್ಯ ದಿನದ ವಿಶೇಷವಾಗಿ ಘೋಷಣೆ ಮಾಡಿದ್ದಾರೆ.
ಈವರೆಗೆ ಪಶ್ಚಿಮ ಬಂಗಾಳವು 922 ಸೋಂಕಿತರಿದ್ದು, ಅದರಲ್ಲಿ 723 ಪ್ರಕರಣಗಳು ಸಕ್ರಿಯವಾಗಿದೆ. 151 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಕೊರೊನಾದಿಂದ 48 ಜನರು ಸಾವನ್ನಪ್ಪಿದ್ಧಾರೆ.