ನವದೆಹಲಿ, ಮೇ 04 (Daijiworld News/MB) : ಇಂದಿನಿಂದ ದೇಶದಲ್ಲಿ ಮೂರನೇ ಹಂತದ ಲಾಕ್ಡೌನ್ ಆರಂಭವಾಗಲಿದ್ದು 17ರವರೆಗೂ ಮುಂದುವರಿಯಲಿದೆ. ಹಲವು ರಾಜ್ಯಗಳಲ್ಲಿ ಕಂಟೆನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಮೂರನೇ ಹಂತದ ಲಾಕ್ಡೌನ್ ತಲುಪುವಷ್ಟರಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ 40, 263ಕ್ಕೆ ಏರಿಕೆಯಾಗಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 2,487 ಜನರಲ್ಲಿ ಸೋಂಕು ದೃಢಪಟ್ಟಿದ್ದು 83 ಜನರು ಕೊರೊನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಕೊರೊನಾಗೆ ಈವರೆಗೆ 1, 306 ಜನರು ಸಾವನ್ನಪ್ಪಿದ್ದು 10887 ಮಂದಿ ಗುಣಮುಖರಾಗಿದ್ದಾರೆ.
ಇನ್ನು ಅತೀ ಹೆಚ್ಚು ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ 12296 ಪ್ರಕರಣಗಳು ದಾಖಲಾಗಿದ್ದು 521 ಮಂದಿ ಸಾವನ್ನಪ್ಪಿದ್ದಾರೆ. 2000 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕರ್ನಾಟಕದಲ್ಲಿ 614, ಗುಜರಾತ್ನಲ್ಲಿ 5055, ದೆಹಲಿಯಲ್ಲಿ 4122 ಪ್ರಕರಣಗಳು, ತಮಿಳುನಾಡಿನಲ್ಲಿ 2757 ಪ್ರಕರಣಗಳು, ರಾಜಸ್ಥಾನದಲ್ಲಿ 2772 ಪ್ರಕರಣಗಳು, ಮಧ್ಯಪ್ರದೇಶದಲ್ಲಿ 2846 ಆಂಧ್ರ ಪ್ರದೇಶದಲ್ಲಿ 1583 ಪ್ರಕರಣ, ತೆಲಂಗಾಣದಲ್ಲಿ 1063 ಪ್ರಕರಣಗಳು, ಉತ್ತರ ಪ್ರದೇಶದಲ್ಲಿ 2626, ಕೇರಳ 500 ಪ್ರಕರಣಗಳು, ಜಮ್ಮು ಕಾಶ್ಮೀರದಲ್ಲಿ 666 ಪ್ರಕರಣಗಳು, ಪಶ್ಚಿಮ ಬಂಗಾಳದಲ್ಲಿ 922 ಪ್ರಕರಣಗಳು ದಾಖಲಾಗಿದೆ.