ಬೆಂಗಳೂರು, ಮೇ 04 (DaijiworldNews/PY) : ಐಎಎಫ್ ನೌಕಾದಳದ ಮುಖ್ಯಸ್ಥನ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಿದ ಪ್ರಕರಣದ ಹಿನ್ನೆಲೆ ಮೂವರನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಎ.29 ರಂದು ನಡೆದಿದ್ದು, ಘಟನೆ ಹಿನ್ನೆಲೆ ದ್ವಾರಕಾನಗರ ನಿವಾಸಿ ಅಮೋದ್ ಸಂಜಯ್ ಎಂಬ ಅಧಿಕಾರಿ ದೂರು ದಾಖಲಿಸಿದ್ದರು.
ದೂರಿನ ಆಧಾರದಂತೆ ಖಾಸಗಿ ಕಂಪೆನಿಯ ಎಂಡಿ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹತ್ತಿರ ಅಂಗಡಿ,ಯೊಂದಕ್ಕೆ ದೂರು ನೀಡಿದ ಅಧಿಕಾರಿ ಪತ್ನಿಯೊಂದಿಗೆ ತೆರಳುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಅಪಾರ್ಟ್ ಮೆಂಟ್ನ ಮುಂಭಾಗದಲ್ಲಿ ದಿಢೀರನೇ ದ್ವಿಚಕ್ರ ವಾಹನ ಬಂದಿದ್ದರಿಂದ ಬ್ರೇಕ್ ಹಾಕಲಾಯಿತು. ಈ ಸಂದರ್ಭ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ಅಲದಲಿಂದ ತೆರಳಿದ ಬೈಕ್ ಸವಾರನು ಮತ್ತೆ ಇಬ್ಬರು ವ್ಯಕ್ತಿಗಳೊಂದಿಗೆ ಬೈಕ್ನಲ್ಲಿ ಬಂದು ಅಮೋದ್ ಅವರ ಕಾರ್ನ ಕೀಯನ್ನು ಕಿತ್ತುಕೊಂಡಿದ್ದಾರೆ. ಅಮೋದು ಅವರನ್ನು ಸುಮಾರು 15-20 ನಿಮಿಷಗಳವರೆಗೆ ಬೈಯ್ದು ಬಳಿಕ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೇ ಕಾರ್ನ ಬಂಪರ್ಗೂ ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.