ನವದೆಹಲಿ, ಮೇ 04 (Daijiworld News/MB) : ಕೊರೊನಾ ಲಾಕ್ಡೌನ್ ಪರಿಣಾಮ ಮಾಲ್ಡೀವ್ಸ್ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಹಡಗು ಮೂಲಕವಾಗಿ ಕರೆತರಲಾಗುವುದು. ಮೊದಲ ಹಡಗಿನಲ್ಲಿ 200 ಮಂದಿಯನ್ನು ಕರೆತರಲಾಗುವುದು ಎಂದು ಮಾಲೆನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
ಸಾಂದರ್ಭಿಕ ಚಿತ್ರ
ರಾಯಭಾರಿ ಕಚೇರಿಯಲ್ಲಿ ಈಗಾಗಲೇ ನೋಂದಣಿ ಮಾಡಿರುವವರಲ್ಲಿ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವವರು, ಗರ್ಭಿಣಿಯರು, ಹಿರಿಯ ನಾಗರಿಕರು, ಪ್ರವಾಸಿಗರು ಮತ್ತು ಕೆಲಸ ಕಳೆದುಕೊಂಡಿರುವ ಕಾರ್ಮಿಕರಗೆ ಆದ್ತಯೆ ನೀಡಲಾಗುತ್ತದೆ. ಮಾಲ್ಡೀವ್ಸ್ನಿಂದ ಹಡಗು ಕೇರಳದ ಕೊಚ್ಚಿಗೆ ತಲುಪಲಿದ್ದು ಅಲ್ಲಿ 14 ದಿನಗಳ ಕಾಲ ಕ್ವಾರೆಂಟೈನ್ನಲ್ಲಿರಸಲಾಗುವುದು ಆ ಬಳಿಕ ಪ್ರಯಾಣಿಕರು ಕೇರಳ ಮತ್ತು ಕೇಂದ್ರ ಸರ್ಕಾರದ ಅನುಮತಿ ಪಡೆದು ತಮ್ಮ ಊರಿಗೆ ಪ್ರಯಾಣ ಮಾಡಬಹುದು ಎಂದು ತಿಳಿಸಿದೆ.
ಮಾಲೆಯಿಂದ ಕೊಚ್ಚಿಗೆ ತಲುಪಲು ಹಡಗಿನಲ್ಲಿ 48 ಗಂಟೆಗಳ ಕಾಲ ಪ್ರಯಾಣವಿದೆ. ಮೊದಲ ಹಡಗಿನಲ್ಲಿ 200 ಮಂದಿಯನ್ನು ಕರೆತರಲು ನಿರ್ಧರಿಸಿದ್ದು ಆದರೆ ಯಾವಾಗ ಎಂದು ತೀರ್ಮಾನಿಸಿಲ್ಲ. ಮುಂಗಾರು ಮುಂಚಿನ ಹವಾಮಾನದಲ್ಲಿ ಪ್ರಯಾಣ ಮಾಡುವುದು ಕಷ್ಟವಿದೆ. ಅಗತ್ಯ ವೈದ್ಯಕೀಯ ಸಹಾಯಗಳನ್ನು ಹಡಗಿನಲ್ಲಿ ಒದಗಿಸಲಾಗುತ್ತದೆ. ಇನ್ನು ಕೊಚ್ಚಿಯಲ್ಲಿ ಕ್ವಾರಂಟೈನ್ನಲ್ಲಿರಿಸುವಾಗಲೂ ಸಾಮಾನ್ಯ ಸೌಕರ್ಯಗಳನ್ನೇ ಒದಗಿಸಲಿದ್ದು ಅದಕ್ಕಾಗಿ ಹಣ ಪಾವತಿ ಮಾಡಬೇಕಿದೆ.
ಭಾರತವೂ ಕೊರೊನಾ ಹರಡುತ್ತಿದ್ದಂತೆ ಚೀನಾ, ಇಟಲಿ, ಇರಾನ್, ಅಫ್ಘಾನಿಸ್ತಾನ ಮತ್ತು ಜಪಾನ್ನಲ್ಲಿದ್ದ ಭಾರತೀಯರನ್ನು ಕರೆದುಕೊಂಡು ಬಂದಿತ್ತು. ಹಾಗೆಯೇ ಮಲೇಷ್ಯಾ ಮತ್ತು ಇತರ ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರಲು ಚಿಂತನೆ ನಡೆಸಿತ್ತು.