ಮುಂಬೈ, ಮೇ 04 (Daijiworld News/MB) : ಕೊರೊನಾ ಸೋಂಕಿತ ವ್ಯಕ್ತಿಗೆ ವೈದ್ಯನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ 44 ವರ್ಷದ ಪುರುಷನನ್ನು ನಗರದ ಖಾಸಗಿ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಚಿಕಿತ್ಸೆಯ ಸಂದರ್ಭದಲ್ಲಿ 34 ವರ್ಷದ ವೈದ್ಯನು ಅಸಹಜವಾಗಿ ಸ್ವರ್ಶಿಸುತ್ತಿದ್ದ ಎಂದು ಸೋಂಕಿತನು ಆರೋಪ ಮಾಡಿದ್ದಾನೆ. ಈ ಹಿನ್ನಲೆಯಲ್ಲಿ ವೈದ್ಯನನ್ನು ಆಸ್ಪತ್ರೆಯಿಂದ ವಜಾ ಮಾಡಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡುತ್ತಿದ್ದ ಕಾರಣಕ್ಕೆ ವೈದ್ಯನನ್ನು ಬಂಧನ ಮಾಡದೆ ಆತನ ಮನೆಯಲ್ಲಿಯೇ ಪೊಲೀಶ್ ಬಂದೋಬಸ್ತ್ನಲ್ಲಿ ಕ್ವಾರಂಟೈನ್ ಇರಿಸಲಾಗಿದೆ.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ಕ್ವಾರಂಟೈನ್ ಅವಧಿ ಮುಗಿದ ಬಳಿಕ ವೈದ್ಯನನ್ನು ಪೊಲೀಸ್ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.